ಶಿರೂರಲ್ಲಿ ಮೂವರ ಮೇಲೆ ಹಲ್ಲೆ

ಬೈಂದೂರು ಪೊಲೀಸರು ಪ್ರಕರಣ ದಾಖಲು
Thrash
Thrash
Published on: 

ಬೈಂದೂರು: ಶಿರೂರಿನ ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ನಡೆಸುತ್ತಿದ್ದ ಶಿರೂರು ಹಡವಿನಕೋಣೆ ನಿವಾಸಿ ಸಾಯಿರಾಮ್(22) ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 11 ಮಂದಿ ವಿರುದ್ಧ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ.10ರಂದು ಸಂಜೆ 4.30ರ ವೇಳೆಗೆ ಸಾಯಿರಾಮ್ ಅವರು ಗಾಂಧಿ ಮೈದಾನದಲ್ಲಿ ಪಟಾಕಿ ವ್ಯಾಪಾರ ನಡೆತ್ತಿದ್ದ ವೇಳೆ ಆರೋಪಿಗಳಾದ ಶಶಿಕುವಾರ್ ಮೇಸ್ತ, ತಿಮ್ಮಪ್ಪ ಮೇಸ್ತ, ಸೌಮ್ಯಾ ತಿಮ್ಮಪ್ಪ ಮೇಸ್ತ, ದೀಕ್ಷಿತ ಮೇಸ್ತ, ನಿತೇಶ್ ತಿಮ್ಮಪ್ಪ ಮೇಸ್ತ, ದರ್ಶನ ನಾಗರಾಜ ಮೇಸ್ತ, ದೀಪಕ್ ಬಾಲಕೃಷ್ಣ ಮೇಸ್ತ, ಧನುಷ್ ಬಾಲಕೃಷ್ಣ ಮೇಸ್ತ, ಆಶಿಶ್ ಮೇಸ್ತ, ಮಂಜುನಾಥ ನಾಗೇಶ್ ಮೇಸ್ತ ಹಾಗೂ ಶ್ರೀಧರ್ ಜಿ. ಎಂಬುವರು ಸಾಯಿರಾಮ್ ಹಾಗೂ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಲ್ಲಿ ಅಂಗಡಿ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಪಟಾಕಿಗಳನ್ನು ಎಸೆದು, ಸಾಯಿರಾಮ್ ಹಾಗೂ ಸ್ನೇಹಿತರಾದ ದರ್ಶನ ಮತ್ತು ಪಿಯುಷ್ ಅವರಿಗೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಸಾಯಿರಾಮ್, ದರ್ಶನ ಹಾಗೂ ಇತರ ಸ್ನೇಹಿತರಿಗೆ ಗಾಯವಾಗಿದೆ.