ಅಂಗವಿಕಲೆ ಮೇಲೆ ಹಲ್ಲೆ

Assault
Assault
Published on
ಬೈಂದೂರು: ಕೊಲ್ಲೂರು ಗ್ರಾಮದ ಹೆಗ್ಡೆಹಕ್ಕು ನಿವಾಸಿ ಹಾಗೂ ಕಂದಾಯ ಇಲಾಖೆ ಉದ್ಯೋಗಿ, ಅಂಗವಿಕಲೆ ಚಂದ್ರಾವತಿ(50) ಅವರ ಮೇಲೆ ಹಲ್ಲೆ ನಡೆದಿದೆ. ಜುಲೈ 16ರಂದು ಮಧ್ಯಾಹ್ನ 2ರ ವೇಳೆಗೆ ಮನೆ ಪಕ್ಕದ ನಿವಾಸಿ ಯಶೋದಾ ಅವರು ಮನೆ ಹತ್ತಿರದ ದಾರಿಗೆ ಕಲ್ಲು ಮತ್ತು ಗಿಡಗಳನ್ನು ಅಡ್ಡವಾಗಿ ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಚಂದ್ರಾವತಿ ತಮ್ಮ ತ್ರಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವಾಹನದ ಚಕ್ರ ತಿರುಗಿ ಬೀಳುವ ಪರಿಸ್ಥಿತಿ ಉಂಟಾಗಿದೆ.
ದಾರಿಯಲ್ಲಿದ್ದ ಕಲ್ಲನ್ನು ತೆರವುಗೊಳಿಸಲು ಮುಂದಾದಾಗ ಯಶೋದಾ ಬೆತ್ತದಿಂದ ಹಲ್ಲೆ ನಡೆಸಿ, ಅಂಗವೈಕಲ್ಯವನ್ನು ಅವಹೇಳನ ಮಾಡುವ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಂಗವಿಕಲರಾಗಿರುವ ಕಾರಣ ತಕ್ಷಣ ಠಾಣೆಗೆ ತೆರಳಿ ದೂರು ನೀಡಲು ಸಾಧ್ಯವಾಗದೆ, ಬಳಿಕ ತಮ್ಮ ಪತಿಯೊಂದಿಗೆ ಚರ್ಚಿಸಿ ಕೊಲ್ಲೂರು ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net