ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಗೋ ಪೂಜೆ, ಪ್ರಧಾನ ಪ್ರಾಯಶ್ಚಿತ್ತಾದಿ ಹೋಮ, ಕಲಾಭಿಷೇಕ, ತನುತುಂಬಿಲ ಸೇವೆ, ನಾಗದರ್ಶನ, ಪಲ್ಲಪೂಜೆ ನಡೆಯಲಿದೆ. 11 ಗಂಟೆಗೆ ದೈವದೇವರ ಸಾನ್ನಿಧ್ಯದಲ್ಲಿ ಪಂಜುರ್ಲಿಗೆ ವಿಶೇಷ ಪೂಜೆ, 11:30ಕ್ಕೆ ಮಹಾಪೂಜೆ, ವಟು-ಬ್ರಾಹ್ಮಣ, ಸುಹಾಸಿನಿ ಆರಾಧನೆ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ತೀರ್ಥ ಪ್ರಸಾದದ ವಿತರಣೆ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ರಾತ್ರಿ 7:30ಕ್ಕೆ ಹಾಲಿಟ್ಟು ಸೇವೆ, 8:30ಕ್ಕೆ ನಾಗಮಂಡಲೋತ್ಸವ ನೆರವೇರಲಿದೆ. ರಾತ್ರಿ 12:30ಕ್ಕೆ ಪ್ರಸಾದ ವಿತರಣೆ, ಮಂತ್ರಾಕ್ಷತೆ ಇರಲಿದೆ.