ಗಮಕ ವಾಚನದಲ್ಲಿದೆ ಕಾವ್ಯದ ರಸಪಾಕ

ಉಡುಪಿ ಆಯೋಜಿಸಿದ್ದ 'ಆಷಾಢ ಸಂಧ್ಯಾ' ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಮಂಜುನಾಥ್​ ಭಟ್​ ಉದ್ಘಾಟಿಸಿದರು. ಡಾ. ಸುದರ್ಶನ ಪರ್ಲತ್ತಾಯ, ಸತೀಶ್​ ಕುಮಾರ್​ ಕೆಮ್ಮಣ್ಣು, ಡಾ. ರಾಘವೇಂದ್ರ ರಾವ್​ ಇದ್ದರು.
ಉಡುಪಿ ಆಯೋಜಿಸಿದ್ದ 'ಆಷಾಢ ಸಂಧ್ಯಾ' ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಮಂಜುನಾಥ್​ ಭಟ್​ ಉದ್ಘಾಟಿಸಿದರು. ಡಾ. ಸುದರ್ಶನ ಪರ್ಲತ್ತಾಯ, ಸತೀಶ್​ ಕುಮಾರ್​ ಕೆಮ್ಮಣ್ಣು, ಡಾ. ರಾಘವೇಂದ್ರ ರಾವ್​ ಇದ್ದರು.
Published on

* ಗಾಯಕ ಡಾ. ಮಂಜುನಾಥ್​ ಭಟ್​ ಅನಿಸಿಕೆ

* 'ಆಷಾಢ ಸಂಧ್ಯಾ' ಗಮಕ ವಾಚನ ವ್ಯಾಖ್ಯಾನ 

ಉಡುಪಿ: ಗಮಕ ವಾಚನಕಾರರು ಸ್ವರಕಂಪನದ ಮೂಲಕ ಕಾವ್ಯದ ಭಾವವನ್ನು ಹತ್ತಿರವಾಗಿಸಿದರೆ, ವ್ಯಾಖ್ಯಾನಕಾರರು ಕಾವ್ಯದ ರಚನಾತ್ಮಕ ಅಂಶ, ರಸತತ್ತ್ವ, ಕಾವ್ಯ ಸೌಂದರ್ಯವನ್ನು ಕೇಳುಗರ ಹೃದಯಕ್ಕೆ ತಲುಪಿಸುತ್ತಾರೆ. ಕಾವ್ಯದ ರಸಪಾಕ ಉಣಬಡಿಸುವಲ್ಲಿ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಕ್ಕಿಂತ ಪರಿಣಾಮಕಾರಿ ಮಾಧ್ಯಮ ಇನ್ನೊಂದು ಇರಲಾರದು ಎಂದು ನಿವೃತ್ತ ಸಂಸ್ಕೃತ ಉಪನ್ಯಾಸಕ, ಹಿಂದೂಸ್ಥಾನಿ ಗಾಯಕ ಡಾ. ಮಂಜುನಾಥ್​ ಭಟ್​ ತಿಳಿಸಿದರು.
ಉಡುಪಿ ಗುಂಡಿಬೈಲಿನಲ್ಲಿರುವ ಅಭಿರಾಮ ಧಾಮದಲ್ಲಿ ಉಡುಪಿ ಜಿಲ್ಲಾ ಕರ್ನಾಟಕ ಗಮಕಕಲಾ ಪರಿಷತ್​ ಮತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಹಾಗೂ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದಲ್ಲಿ ಆಯೋಜಿಸಿದ್ದ 'ಆಷಾಢ ಸಂಧ್ಯಾ' ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ. ಸುದರ್ಶನ ಪರ್ಲತ್ತಾಯ ಮಾತನಾಡಿ, ಜನರನ್ನು ಸನ್ಮಾರ್ಗದಲ್ಲಿ ನಡೆಸುವಲ್ಲಿ ಗಮಕದ ಕೊಡುಗೆ ಅನನ್ಯ ಎಂದರು.
ವಾಚನಕಾರ್ತಿ ಪ್ರಿಯಾಂಕಾ ಅನಿಲ್​ ಮೆಹಂದಳೆ ದುಬೈ ಮತ್ತು ವ್ಯಾಖ್ಯಾನಕಾರ ಡಾ. ರಾಘವೇಂದ್ರ ರಾವ್​ ಉಡುಪಿ ಅವರು ಕುಮಾರವ್ಯಾಸ ಕವಿಯ 'ಅತಿಥಿ ದೇವೋ ಭವ' ಎಂಬ ಕಾವ್ಯ ಭಾಗದ ಗಮಕ ನಡೆಸಿಕೊಟ್ಟರು. ಕಲಾವಿದರು, ಅತಿಥಿ ಹಾಗೂ ಕಾರ್ಯಕ್ರಮದ ಪ್ರಾಯೋಜಕ ಸೀತಾರಾಮ ಮೆಹಂದಳೆ ಅವರನ್ನು ಪರಿಷತ್​ ವತಿಯಿಂದ ಗೌರವಿಸಲಾಯಿತು.
ಪ್ರಣಾದ ರಾವ್​ ಪ್ರಾರ್ಥಿಸಿದರು. ಡಾ. ಪ್ರಫುಲ್ಲಾ ಜಿ. ಭಟ್​ ವಂದಿಸಿದರು. ಉಪನ್ಯಾಸಕಿ ವಂದನಾ ಕಾರ್ಯಕ್ರಮ ನಿರೂಪಿಸಿದರು. ಗಮಕ ಕಲಾ ಪರಿಷತ್​ ಹಾಗೂ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು, ಕಾವ್ಯರಸಿಕರು ಪಾಲ್ಗೊಂಡಿದ್ದರು.
"

ಗಮಕ ಕಾರ್ಯಕ್ರಮ, ಗಮಕ ಶಿಕ್ಷಣ, ಗಮಕ ಪುರಸ್ಕಾರ ಹೀಗೆ ವಿಭಿನ್ನ ಮುಖಗಳಲ್ಲಿ ಜಿಲ್ಲಾ ಪರಿಷತ್​ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿದೆ. ತನ್ಮೂಲಕ ಕನ್ನಡ ಸಾಹಿತ್ಯ ಕೃತಿಗಳನ್ನು ಸಹೃದಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ.

— ಸತೀಶ್​ ಕುಮಾರ್​ ಕೆಮ್ಮಣ್ಣು. ಉಡುಪಿ ಜಿಲ್ಲಾ ಗಮಕಕಲಾ ಪರಿಷತ್​ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net