ಕಮಾಂಡರ್​ ಡಾ. ಅನಿಲ್​ ರಾಣಾಗೆ ಆರ್ಯಭಟ ಪ್ರಶಸ್ತಿ

ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಕಮಾಂಡರ್​ ಡಾ. ಅನಿಲ್​ ರಾಣಾ.
ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಕಮಾಂಡರ್​ ಡಾ. ಅನಿಲ್​ ರಾಣಾ.
Published on

* ಹಿರಿಯ ಶಿಕ್ಷಣತಜ್ಞ, ಮಾಹೆಯ ನಿರ್ದೇಶಕ

ಉಡುಪಿ: ಶಿಕ್ಷಣ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತ ಕ್ಷೇತ್ರಗಳಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ವಿಶಿಷ್ಟ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಣತಜ್ಞ, ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ)ನ ನಿರ್ದೇಶಕ ಹಾಗೂ ಈ ಹಿಂದೆ ಓರಿಯೆಂಟಲ್​ ವಿಶ್ವವಿದ್ಯಾಲಯ, ಇಂದೋರ್​ನ ಕುಲಪತಿಯಾಗಿದ್ದ ಡಾ. ಅನಿಲ್​ ರಾಣಾ ಅವರಿಗೆ 'ಆರ್ಯಭಟ' ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್​ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜೂ. 21ರಂದು ಆರ್ಯಭಟ ಎಜುಕೇಶನಲ್​ ಟ್ರಸ್ಟ್​ ಹಾಗೂ ಚೇತನ ಫೌಂಡೇಷನ್​ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ ಅವರಿಗೆ 'ಆರ್ಯಭಟ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ. ಚಂದ್ರಶೇಖರ ಮಾಡಲಗೇರಿ ಸಂಯೋಜಿಸಿದ್ದರು.

ಭಾರತೀಯ ನೌಕಾಪಡೆಯ ಕಮಾಂಡರ್​

ಭಾರತೀಯ ನೌಕಾಪಡೆಯ ಇಂಜಿನಿಯರಿಂಗ್​ ವಿಭಾಗದಲ್ಲಿ ಕಮಾಂಡರ್​ ಆಗಿದ್ದರು. ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿ ಸಾಧನೆ ಮಾಡಿದ್ದಾರೆ. ಐಐಟಿ ಮುಂಬಯಿಯಿಂದ ರಿಲಯಬಿಲಿಟಿ ಇಂಜಿನಿಯರಿಂಗ್​ನಲ್ಲಿ ಪಿಎಚ್​.ಡಿ ಹಾಗೂ ಐಐಟಿ ದೆಹಲಿಯಿಂದ ಎಂ.ಟೆಕ್​ ಪದವಿ ಗಳಿಸಿದ್ದು ಸಂಶೋಧನೆ, ಬೋಧನೆ ಹಾಗೂ ಶೈಕ್ಷಣಿಕ ಆಡಳಿತ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net