ವಿದ್ಯಾರ್ಥಿಗಳ ಕೈಯಲ್ಲರಳಿದ ಕಲಾಕೃತಿಗಳು

 ಪಡುಕರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಕಲಾಕೃತಿಗಳು
ಪಡುಕರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಕಲಾಕೃತಿಗಳು
Published on
 ವಿಜಯವಾಣಿ ಸುದ್ದಿಜಾಲ ಕೋಟ 
 ಮಣೂರು ಪಡುಕರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ವಿಜ್ಞಾನ ಜ್ಞಾನ ಹಾಗೂ ತಂಡ ಸ್ಫೂರ್ತಿ ಒಂದೇ ವೇದಿಕೆಯಲ್ಲಿ ಮೇಳೈಸಿದವು. ಕಾಲೇಜು ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಬೆಂಕಿ ಇಲ್ಲದೆ ಅಡುಗೆ, ತ್ಯಾಜ್ಯದಿಂದ ಕಲಾಕೃತಿ, ಲೋಗೋ ರಂಗೋಲಿ ಮತ್ತು ಸೈನ್ಸ್ ರಂಗೋಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. 
 ವಿದ್ಯಾರ್ಥಿಗಳು ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್, ನಂದಿನಿ, ರಾಯಲ್ ಎನ್‌ಫೀಲ್ಡ್, ಪೋರ್ಶೆ, ಬಿಎಂಡಬ್ಲೂೃ, ಗೀತಾನಂದ ಫೌಂಡೇಶನ್ ಮುಂತಾದ ಸಂಸ್ಥೆಗಳ ಲೋಗೋಗಳನ್ನು ರಂಗೋಲಿಯಲ್ಲಿ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 
 ಇದರ ಜತೆಗೆ ಸಸ್ಯ ಜೀವಕೋಶ, ಕಪ್ಪೆಯ ಜೀರ್ಣಾಂಗವ್ಯೆಹ, ರಸಾಯನಶಾಸ್ತ್ರ ಪರಿಕಲ್ಪನೆಗಳು, ವಾನವ ಶರೀರದ ರಕ್ತ ಸಂಚಾರ ವ್ಯವಸ್ಥೆ ಹೀಗೆ ಮುಂತಾದ ಆಕೃತಿಗಳನ್ನು ವರ್ಣರೂಪದಲ್ಲಿ ಮೂಡಿಸಿದರು. 

 ಬೆಂಕಿ ಇಲ್ಲದೆ ಥರಾವರಿ ಅಡುಗೆ

 ವಿದ್ಯಾರ್ಥಿಗಳು ಬೆಂಕಿ ಬಳಸದೆ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದರು. ವಿವಿಧ ಹಣ್ಣುಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿದ ಫ್ರೂಟ್ ಪ್ಲೇಟು, ತರಕಾರಿ ಮತ್ತು ಸೇವ್ ತುಂಬಿದ ಕಾಕಡಿ ಬೋಟ್‌ಗಳು, ಜ್ಯಾಮ್ ಮತ್ತು ಚಾಕೊಲೇಟ್ ವಿನ್ಯಾಸದ ಸ್ಯಾಂಡ್‌ವಿಚ್‌ಗಳು, ಸೊಗಸಾಗಿ ಅಲಂಕರಿಸಿದ ಡೆಸೆರ್ಟ್ ಗ್ಲಾಸ್‌ಗಳು, ಬಿಸ್ಕೆಟ್ ಕೇಕ್ ಮುಂತಾದವು ವಿದ್ಯಾರ್ಥಿಗಳ ಕೈಚಳಕದ ಚಮತ್ಕಾರಕ್ಕೆ ಸಾಕ್ಷಿಯಾಯಿತು.

ತ್ಯಾಜ್ಯದಿಂದ ಆಕರ್ಷಕ ವಸ್ತುಗಳ ತಯಾರಿ

 ಆರ್ಟ್ ಫ್ರಂ ವೇಸ್ಟ್ ವಿಭಾಗದಲ್ಲಿ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಆಕರ್ಷಕ ವಸ್ತುಗಳನ್ನು ತಯಾರಿಸಿದರು. ಬಾಟಲಿಯಿಂದ ತಯಾರಿಸಿದ ಸುಂದರ ಜೋಡಿ ಗೊಂಬೆಗಳು, ಪ್ಲಾಸ್ಟಿಕ್ ಚಮಚಗಳಿಂದ ತಯಾರಿಸಿದ ಅಲಂಕಾರಿಕ ಹೂವಿನ ವಿನ್ಯಾಸ, ಪೇಪರ್ ರೋಲ್‌ಗಳು ಮತ್ತು ಮಣಿಗಳಿಂದ ಸಿದ್ಧಗೊಂಡ ಅಲಂಕಾರಿಕ ವಸ್ತುಗಳು ಆಕರ್ಷಣೀಯವಾಗಿದ್ದವು. 
"

ನಮ್ಮ ಕಾಲೇಜಿನಲ್ಲಿ ಆಯೋಜಿಸಲಾದ ಸೃಜನಶೀಲ ಸ್ಪರ್ಧೆಗಳು ಕೇವಲ ಮನರಂಜನೆಗಾಗಿ ವಾತ್ರವಲ್ಲ, ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕತೆ, ನಾಯಕತ್ವ ಗುಣ, ತಂಡ ಭಾವನೆ ಹಾಗೂ ಸೃಜನಶೀಲತೆ ವೃದ್ಧಿಸುವ ಮಹತ್ವದ ವೇದಿಕೆಯಾಗಿದೆ. ಈ ವರ್ಷದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹದಿಂದ ಭಾಗವಹಿಸಿದ್ದರು.

ಕಾಲೇಜಿನಲ್ಲಿ ಆಯೋಜಿಸಲಾದ ವಿಭಿನ್ನ ಸೃಜನಶೀಲ ಸ್ಪರ್ಧೆಗಳು ನಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು, ಹೆಚ್ಚು ಸೃಜನಶೀಲರಾಗಿ ತೊಡಗಿಸಿಕೊಳ್ಳಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಹೊಸ ಅನುಭವ ಪಡೆಯಲು ವೇದಿಕೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net