ಕೆತ್ತಿಕಲ್‌ನಲ್ಲಿ ಕೃತಕ ನೆರೆ

 ಶುಕ್ರವಾರ ಬೆಳಗ್ಗಿನಿಂದ ಸುರಿಯುತ್ತಿರುವ ಜಡಿಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದ ಕೆಳಗಡೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಕ್ಷರಶಃ ಕೃತಕ ನೆರೆ ಉಂಟಾಗಿರುವುದು.
ಶುಕ್ರವಾರ ಬೆಳಗ್ಗಿನಿಂದ ಸುರಿಯುತ್ತಿರುವ ಜಡಿಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದ ಕೆಳಗಡೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಕ್ಷರಶಃ ಕೃತಕ ನೆರೆ ಉಂಟಾಗಿರುವುದು.
Published on
ಗುರುಪುರ: ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪೂರ್ಣ ಕಾಮಗಾರಿಯಿಂದ ಮಳೆಗಾಲದಲ್ಲಿ ಎದುರಾಗುವ ಹಲವು ಗಂಭೀರ ಸಮಸ್ಯೆಗಳು ಈ ಬಾರಿ ಆರಂಭದ ಮಳೆಗೆ ಕಂಡು ಬಂದಿದೆ.
ಶುಕ್ರವಾರ ಬೆಳಗ್ಗಿನಿಂದ ಸುರಿಯುತ್ತಿರುವ ಜಡಿಮಳೆಗೆ ಕೆತ್ತಿಕಲ್ ಗುಡ್ಡ ಪ್ರದೇಶದ ಕೆಳಗಡೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಅಕ್ಷರಶಃ ಕೃತಕ ನೆರೆ ಕಂಡುಬಂದಿದೆ. ಕೆತ್ತಿಕಲ್, ಪರಾರಿ, ವಾಮಂಜೂರು ಭಾಗದಲ್ಲಿ ಹೆದ್ದಾರಿ ತುಂಬೆಲ್ಲ ನೀರಿಂದ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.
ಕಳೆದ ವರ್ಷದ ಮಳೆಗೆ ಗುಡ್ಡ ಕುಸಿದಿದ್ದ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಹೆದ್ದಾರಿ ರಕ್ಷಣೆಗಾಗಿ ಈ ಬಾರಿ ಗ್ಯಾಬಿಯಲ್ ವಾಲ್ ನಿರ್ಮಿಸಲಾಗಿದೆ.
ಹಿಂದಿನ ಬಾರಿ ಇಲ್ಲಿ ಗುಡ್ಡದ ಮೇಲಿಂದ ಹೆದ್ದಾರಿಯತ್ತ ಒಂದೆರಡು ನೀರಿನ ಝರಿ ಇದ್ದರೂ, ನಿನ್ನೆ ಸುರಿದ ಮೊದಲ ಮಳೆಗೆ ಗ್ಯಾಬಿಯನ್ ವಾಲ್, ಗುಡ್ಡಕ್ಕೆ ಹಾಸಲಾದ ರಕ್ಷಣಾ ತಂತ್ರಜ್ಞ್ಞಾನ ಹಾಸುಗಳ ಉದ್ದಕ್ಕೂ ನೀರಿನ ಝರಿಗಳು ಕಂಡುಬಂದಿವೆ. ಇಲ್ಲೆಲ್ಲ ಈ ಬಾರಿ ಗುಡ್ಡ ಕುಸಿಯುವ ಅಪಾಯ ಎದುರಾಗಿದೆ.
ಅಪೂರ್ಣ ಕಾಮಗಾರಿ ನಡೆದಿರುವ ಪರಾರಿ ಹೆದ್ದಾರಿ ಭಾಗದಲ್ಲಿ ಎಲ್ಲೆಂದರಲ್ಲಿ ಕೆಸರು ನೀರು ಕಂಡುಬಂದಿದೆ. ಹೆದ್ದಾರಿಯ ಬಹುತೇಕ ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುವಂತಾಗಿದೆ. ನೀರಿನೊಂದಿಗೆ ರಸ್ತೆ ಮೇಲೆ ಜಲ್ಲಿ ಕಲ್ಲುಗಳು ಹರಿದಾಡಿ ಅಲ್ಲಲ್ಲಿ ರಾಶಿ ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net