ಬಪ್ಪನಾಡು ಕ್ಷೇತ್ರದಲ್ಲಿ ಕೃತಕ ನೆರೆ

 ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆ ನೀರು ತುಂಬಿ ಕೃತಕ ನೆರೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆ ನೀರು ತುಂಬಿ ಕೃತಕ ನೆರೆ.
Published on
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೋಪುರ ಸ್ಥಳಾಂತರ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು, ವಾಹನ ಸವಾರರು, ಸ್ಥಳೀಯ ಕೃಷಿಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ನಿಧಾನಗತಿಯ ಕಾಮಗಾರಿಯಿಂದ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸ್ವಾಗತ ಗೋಪುರದ ಇಕ್ಕೆಲಗಳಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಗಳಲ್ಲಿ ಮಳೆ ನೀರು ತುಂಬಿ ಕೃತಕ ನೆರೆ ಉಂಟಾಗಿ ದೇವಸ್ಥಾನಕ್ಕೆ ಬರುವ ಭಕ್ತರ ವಾಹನಗಳಿಗೆ ಹಾಗೂ ನಡೆದುಕೊಂಡು ಹೋಗುವವರಿಗೆ ತೊಂದರೆ ಉಂಟಾಯಿತು.
ಬಪ್ಪನಾಡು ದೇವಸ್ಥಾನದ ರಾಜಕಾಲುವೆಗೆ ಕಾಮಗಾರಿ ಸಂದರ್ಭ ಹಾನಿಯಾದ ಕಾರಣ ಕಾಲುವೆ ನೀರು ಸೋರಿಕೆಯಾಗಿ ದೇವಸ್ಥಾನದ ಎದುರು ಭಾಗದ ಕೃಷಿ ಭೂಮಿಗೆ ನೆರೆ ನೀರು ನುಗ್ಗಿ ಕೃಷಿ ಹಾನಿ ಕೂಡ ಸಂಭವಿಸಿದೆ ಎಂದು ಸ್ಥಳೀಯ ಕೃಷಿಕರು ತಿಳಿಸಿದ್ದಾರೆ.

ದೇವಸ್ಥಾನದ ಸ್ವಾಗತ ಗೋಪುರ ಕಾಮಗಾರಿ ಸಮಸ್ಯೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಭಕ್ತರಿಗೆ ತಡೆ ಉಂಟಾಗುತ್ತಿದೆ. ಶೀಘ್ರ ಕಾಮಗಾರಿ ನಡೆಸದಿದ್ದರೆ ಕೃಷಿ, ದೇವಳಕ್ಕೆ ಹೋಗುವ ಜನರಿಗೆ ಸಮಸ್ಯೆಯಾಗುತ್ತದೆ.

— ಶರತ್ ಕಾರ್ನಾಡ್ ಸ್ಥಳೀಯ ಭಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net