ಕಲೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ

 ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಕಲಾ ಪೋಷಕ ಸಂಟಕ ಜನಾರ್ದನ ಹಂದೆ ಉದ್ಘಾಟಿಸಿ ವಾತನಾಡಿದರು. ತಾರಾನಾಥ ಹೊಳ್ಳ, ಅಮರ ಹಂದೆ, ಸುದರ್ಶನ ಉರಾಳ, ಸುರೇಶ ಪೂಜಾರಿ ಉಪಸ್ಥಿತರಿದ್ದರು.
ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಕಲಾ ಪೋಷಕ ಸಂಟಕ ಜನಾರ್ದನ ಹಂದೆ ಉದ್ಘಾಟಿಸಿ ವಾತನಾಡಿದರು. ತಾರಾನಾಥ ಹೊಳ್ಳ, ಅಮರ ಹಂದೆ, ಸುದರ್ಶನ ಉರಾಳ, ಸುರೇಶ ಪೂಜಾರಿ ಉಪಸ್ಥಿತರಿದ್ದರು.
Published on
ಕೋಟ: ದೇವರನ್ನು ಆರಾಧಿಸುವಂತೆ ಕಲೆಯನ್ನು ಆರಾಧಿಸುವವರು ಸಂಸ್ಕಾರವಂತರಾಗುತ್ತಾರೆ. ಜಗತ್ತಿನ ಯಾವುದೇ ಕಲೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ. ಯಕ್ಷಗಾನದಂತಹ ಕಲೆ ಅನನ್ಯತೆಯಿಂದ ಕೂಡಿದ್ದು ವಿಶಿಷ್ಟ ಪ್ರಯೋಗಶೀಲತೆಯನ್ನು ಹೊಂದಿದೆ. ಕಲಾವಿದರು ಯಕ್ಷಗಾನದ ಮೂಲ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಹೊಸ ರೀತಿಯ ಪ್ರಯೋಗಗಳನ್ನು ನೀಡುವುದು ಸೂಕ್ತ ಎಂದು ಕಲಾ ಪೋಷಕ ಸಂಟಕ ಜನಾರ್ದನ ಹಂದೆ ಹೇಳಿದರು.
ಕೋಟ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ಸಾಲಿಗ್ರಾಮ ದೇವಾಲಯ ಜಾತ್ರಾ ಮಹೋತ್ಸವ ಪ್ರಯುಕ್ತ ಬೆಂಗಳೂರು ಯಕ್ಷಂಗಾಣ ಟ್ರಸ್ಟ್ ಶನಿವಾರ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಲಾ ಪೋಷಕ ಸೂರ್ಯನಾರಾಯಣ ಹಂದೆ, ಬೆಂಗಳೂರಿನ ಅನಸೂಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿಶಾಲಾಕ್ಷಿ ಅವರನ್ನು ಗೌರವಿಸಲಾಯಿತು. ಪ್ರಸಂಗಕರ್ತ ಆದಿತ್ಯ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ತಾರಾನಾಥ ಹೊಳ್ಳ, ಹಂದೆ ದೇವಸ್ಥಾನ ಆನುವಂಶಿಕ ಮೊಕ್ತೇಸರ ಅಮರ ಹಂದೆ, ಬೆಂಗಳೂರು ಯಕ್ಷಾಂಗಣ ಟ್ರಸ್ಟ್‌ನ ಸುದರ್ಶನ ಉರಾಳ, ಕಟ್ಟೆ ಬಳಗದ ಸುರೇಶ ಪೂಜಾರಿ ಉಪಸ್ಥಿತರಿದ್ದರು.
ಉಪನ್ಯಾಸಕ ನಾಗೇಂದ್ರ ಐತಾಳ್ ಸ್ವಾಗತಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಮಿತ್ರಾವಿಂದ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net