

ಕಾಸರಗೋಡು: ವಿದ್ಯುತ್ ಬಿಲ್ ಪಾವತಿಸಲು ಸಾಲ ಪಡೆದಿದ್ದ 5 ಸಾವಿರ ರೂ. ಹಿಂತಿರುಗಿಸುವುದಾಗಿ ಭರವಸೆ ನೀಡಿ ಉದ್ಯಮಿಯೊಬ್ಬರನ್ನು ಮನೆಗೆ ಕರೆಸಿ ಹಣ ಎಗರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ನಿವಾಸಿ ರಿಜ್ವಾನಾ(28) ಸೇರಿದಂತೆ ಮೂವರನ್ನು ಕುಂಬಳೆ ಠಾಣೆ ಎಸ್‌ಐ ಅನೂಪ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ರಿಜ್ವಾನಾಳ ಪತಿ ಹಸನ್ ಆಸಿಫ್ (33), ಸಂಬಂಧಿಕ ಹಾಗೂ ಮೊಗ್ರಾಲ್ ನಿವಾಸಿ ಮೊಹಮ್ಮದ್ ಸಿರಾಜ್ (32) ಬಂಧಿತರು.