ಉಜಿರೆಯಲ್ಲಿ ಬೆಳಾಲು, ಸೋಮಂತಡ್ಕ, ಗುರಿಪಳ್ಳ, ಸುರ್ಯ, ಬಸ್ ನಿಲ್ದಾಣ, ಚಾರ್ಮಾಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಿಕ್ಷಾ ಪಾರ್ಕಿಂಗ್ ಇದೆ. ಆದರೆ ಇಲ್ಲಿ ಪಾರ್ಕಿಂಗ್‌ಗೆ ಜಾಗದ ಕೊರತೆಯೂ ಇದೆ. ಇದರಿಂದ ರಿಕ್ಷಾ ಚಾಲಕರಿಗೆ, ವರ್ತಕರಿಗೆ ತೊಂದರೆ ಉಂಟಾಗುತ್ತಿದೆ. ಅಂಗಡಿಗಳ ಮುಂಭಾಗ, ರಸ್ತೆ ವ್ಯಾಪ್ತಿ ಸೇರಿದಂತೆ ಅಲ್ಲಲ್ಲಿ ರಿಕ್ಷಾ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ರಿಕ್ಷಾ ಪಾರ್ಕಿಂಗ್ ಸಮಸ್ಯೆ ಕುರಿತು ಉಜಿರೆಯ ರಿಕ್ಷಾ ಚಾಲಕ-ಮಾಲೀಕರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಲಾಗಿತ್ತು.