

ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಸರ್ವಜ್ಞ ಪೀಠಾರೋಹಣದ ಪ್ರಥಮ ಪರ್ವಕಾಲವಿದು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಾಂಗತ್ಯವೇ ಕೃಷ್ಣಾರಾಧನೆಯ ಪರ್ಯಾಯವಾಗಿದೆ. ಆತನ ಭಕ್ತರೆಲ್ಲರೂ ಸೇರುವ ಶ್ರದ್ಧಾಭಕ್ತಿಯ ಸಮ್ಮಿಲನ. ಸತ್ಸಂಪ್ರದಾಯದ ಸಮ್ಮೇಳನ. ಆಗಮಿಸುವ ಕೃಷ್ಣಭಕ್ತರೆಲ್ಲರಿಗೂ ಪ್ರಸಾದ ವಿತರಿಸಲಾಗುವುದು.
ಶೀರೂರು ಪರ್ಯಾಯಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು ಪ್ರಸಾದದ ಪೊಟ್ಟಣ ಸಿದ್ಧಪಡಿಸುತ್ತಿದ್ದೇವೆ. ಕೃಷ್ಣನ ಸೇವಾರ್ಥ ವಿಪ್ರ ಮಹಿಳೆಯರು ಈ ಕಾರ್ಯದಲ್ಲಿ ತೊಡಗಿದ್ದೇವೆ. ಕಲ್ಲುಸಕ್ಕರೆ, ಉತ್ತತ್ತಿ, ಗೋಡಂಬಿ, ಬದಾಮಿ ಹಾಗೂ ಒಣದ್ರಾಕ್ಷಿಗಳು ಪ್ರಸಾದದ ಪೊಟ್ಟಣದಲ್ಲಿ ಇರಲಿದೆ. ನಿತ್ಯವೂ ವಿವಿಧ ಸೇವಾಕಾರ್ಯಗಳಲ್ಲಿ ತೊಡಗಿದ್ದೇವೆ.