ಕೆ.ಟಿ.ವಿಶ್ವನಾಥ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 25ರಂದು ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ ಕುರಿತು ಒಂದು ದಿನದ ವಿಚಾರಗೋಷ್ಠಿ ನಡೆಯಲಿದ್ದು, 9.30ಕ್ಕೆ ಎಒಎಲ್‌ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಾರ‌್ಯದರ್ಶಿ ಡಾ.ಸಂತೋಷ ಹಾನಗಲ್ಲ, ಸದ್ಸಯ ಯಾಕೂಬ್ ಖಾದರ್ ಗುಲ್ಪಾಡಿ, ಡಾ.ರುದ್ರಕುಮಾರ್, ಮಧುರಾ ಉಪಸ್ಥಿತರಿರುವರು. ವಿಶ್ವನಾಥ ಕೆ.ಟಿ. ಅಧ್ಯಕ್ಷತೆ ವಹಿಸುವರು. ಕವಯತ್ರಿ ಸ್ಮಿತಾ ಅಮೃತರಾಜ್, ಡಾ.ಪೂವಪ್ಪ ಕಣಿಯೂರು, ರಮೇಶ್ ಮಂಚಕಲ್ಲು ಮಂಗಳೂರು, ಬರಹಗಾರ್ತಿ ಸಹನಾ, ಡಾ.ಸುಂದರ ಕೇನಾಜೆ, ಇಸ್ಮತ್ ಪಜೀರ್, ಪಶು ವೈದ್ಯಾಧಿಕಾರಿ ಡಾ.ನಿತಿನ್‌ಪ್ರಭು, ಡಾ.ಸೆಲ್ವರತ್ನಂ ಕಂದಡ್ಕ ವಿವಿಧ ವಿಚಾರಗಳನ್ನು ಮಂಡಿಸಲಿದ್ದಾರೆ.