ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ

ದಿ. ಎಸ್​.ಯು. ಪಣಿಯಾಡಿ.
ದಿ. ಎಸ್​.ಯು. ಪಣಿಯಾಡಿ.
Published on

*  ಏ.30 ಕೊನೆಯ ದಿನ

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ 'ಎಸ್​.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ' ಆಯ್ಕೆಗಾಗಿ ಬರಹಗಾರರಿಂದ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನಿಸಲಾಗಿದೆ.
ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ. ಎಸ್​.ಯು. ಪಣಿಯಾಡಿ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಗೆ ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರದ ಮತ್ತು ಮುದ್ರಣಗೊಳ್ಳದ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಸಕ್ತರು ಕಳುಹಿಸಿಕೊಡಬಹುದು. ಅನುವಾದಿತ ಕೃತಿಗಳಿಗೆ ಅವಕಾಶವಿಲ್ಲ.
ಪ್ರಶಸ್ತಿಗೆ ಆಯ್ಕೆಯಾದಲ್ಲಿ ಬರಹಗಾರರು ಡೆಮಿ 1/8 ಆಕಾರದಲ್ಲಿ 120 ಪುಟಗಳಿಗೆ ಮೀರದಂತೆ ತುಳುಕೂಟದ ಮಾರ್ಗದರ್ಶನದಂತೆ ಮುದ್ರಿಸತಕ್ಕದ್ದು. ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ಸಂಸತಿ ಬಿಂಬಿಸುವ ಅಂಶಗಳಿರಬೇಕು. ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಿಷಯಗಳನ್ನೂ ಆಧರಿಸಿರಬಹುದು. 
ಪ್ರಶಸ್ತಿಯು 8 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ, ಫಲಕ ಒಳಗೊಂಡಿದೆ. ಕಾದಂಬರಿಯ ಹಸ್ತಪ್ರತಿಯನ್ನು ಪ್ರಕಾಶ್​ ಸುವರ್ಣ ಕಟಪಾಡಿ, ಪಣಿಯಾಡಿ ಕಾದಂಬರಿ ಸ್ಪರ್ಧೆ ಸಂಚಾಲಕರು, ಯಶಸ್​, ಕೋಟೆ ಬೀಡಿನ ಬಳಿ, ಕೋಟೆ ಗ್ರಾಮ, ಕಟಪಾಡಿ ಅಂಚೆ, ಉಡುಪಿ ಜಿಲ್ಲೆ-574105 ಈ ವಿಳಾಸಕ್ಕೆ ಏ.30ರೊಳಗೆ ಕಳುಹಿಸಬೇಕು. ಮಾಹಿತಿಗೆ ಮೊ.ಸಂ. 9964019229 ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್​ ಕಿದಿಯೂರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net