ಕಲಿಕೆ ಮೌಲ್ಯಮಾಪನಕ್ಕೆ ಆ್ಯಪ್ ಸಾಥ್

ಬಸ್ರಿಬೇರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಬ್ ಆಧಾರಿತ ಕಲಿಕಾ ನಿರ್ವಹಣಾ ಆ್ಯಪ್ ಪ್ರಾತ್ಯಕ್ಷಿಕೆ ನಡೆಯಿತು.
ಬಸ್ರಿಬೇರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಬ್ ಆಧಾರಿತ ಕಲಿಕಾ ನಿರ್ವಹಣಾ ಆ್ಯಪ್ ಪ್ರಾತ್ಯಕ್ಷಿಕೆ ನಡೆಯಿತು.
Published on

ವಿಜಯವಾಣಿಸುದ್ದಿಜಾಲ ಬೈಂದೂರು

ಮಕ್ಕಳಲ್ಲಿನಶೈಕ್ಷಣಿಕ ಗುಣಮಟ್ಟ ವೃದ್ಧಿಗಾಗಿಶ್ರೀ ಮೂಕಾಂಬಿಕಾ ಎಜುಸಿಸ್ಸಂಸ್ಥೆಯು ಲರ್ನಿಂಗ್ಮ್ಯಾನೇಜ್ಮೆಂಟ್ ಸಿಸ್ಟಂ ಆ್ಯಪ್ಅಭಿವೃದ್ಧಿಗೊಳಿಸಿದ್ದು,ಗ್ರಾಮೀಣಶಾಲೆಗಳಿಗೂ ವೆಬ್ ಆಧಾರಿತ ಕಲಿಕಾನಿರ್ವಹಣೆ ವ್ಯವಸ್ಥೆಯನ್ನುತಲುಪಿಸುವುದು ಪ್ರಮುಖ ಉದ್ದೇಶವಾಗಿದೆ.

ಸಣ್ಣತರಗತಿಯಿಂದ ದೊಡ್ಡ ತರಗತಿ ತನಕಬಹು ವಿಭಾಗಗಳಿರುವ ಶಾಲೆಗಳಿಗೂಹೊಂದಿಕೊಳ್ಳುವಂತೆ ಇಂಜಿನಿಯರ್ವೀರಮಣಿ ಶಾಸ್ತ್ರಿ ಈ ಆ್ಯಪ್ರಚಿಸಿದ್ದು,ಶಿಕ್ಷಕರುಹಾಗೂ ವಿದ್ಯಾರ್ಥಿ ಸ್ನೇಹಿಯಾಗಿದೆ.ಲ್ಯಾಪ್‌ಟಾಪ್ಅಥವಾ ಆಂಡ್ರಾಯ್ಡಾ ಮೊಬೈಲ್ ಮೂಲಕಬಳಸಬಹುದು.ಈಸಾಫ್ಟ್‌ವೇರ್ ಬಳಕೆಗೆ ಇಂಟರ್ನೆಟ್ಅಗತ್ಯವಿಲ್ಲದಿರುವುದು ಮತ್ತೊಂದುವಿಶೇಷ.

ಸಾಫ್ಟ್‌ವೇರ್ಕಾರ್ಯನಿರ್ವಹಣೆ

ಪ್ರತಿತರಗತಿಯ ಬಳಿಕ ವಿದ್ಯಾರ್ಥಿಯಗ್ರಹಿಕೆ ಶಕ್ತಿ ಅಂದಾಜಿಸಲು ಈಆ್ಯಪ್ ಬಹಳ ಸಹಕಾರಿ.ತರಗತಿಯಕೊನೆಯಲ್ಲಿ ಈ ಆ್ಯಪ್ ಮೂಲಕ ಪ್ರತಿವಿದ್ಯಾರ್ಥಿಗಳಿಗೆ ನೀಡಲಾದಮೊಬೈಲ್‌ಗೆ ಪಠ್ಯಕ್ಕೆ ಸಂಬಂಧಿಸಿದ8ರಿಂದ10ಪ್ರಶ್ನೆಗಳನ್ನುಕಳುಹಿಸಲಾಗುತ್ತದೆ.ವಿದ್ಯಾರ್ಥಿಗಳುಈ ಆ್ಯಪ್‌ನಲ್ಲಿ ಪ್ರಶ್ನೆಗಳಿಗೆಉತ್ತರಿಸಬೇಕಿದ್ದು,ಜತೆಗೆವಿಶ್ಲೇಷಣೆಯೂ ಸಾಧ್ಯ.ಒಟ್ಟಾರೆ2ರಿಂದ3ನಿಮಿಷದಪ್ರಕ್ರಿಯೆ ಇದಾಗಿದ್ದು,ಪ್ರತಿಪ್ರಶ್ನೆಗೆ ಉತ್ತರಿಸಿದ ಬಳಿಕನೈಜ ಉತ್ತರದ ಮಾಹಿತಿ ದೊರೆಯಲಿದೆ.ಅಂತಿಮವಾಗಿಈ ಸಾಫ್ಟ್‌ವೇರ್ ಮೂಲಕವೇ ಮೌಲ್ಯಮಾಪನವೂನಡೆಯಲಿದೆ.ವಿದ್ಯಾರ್ಥಿಗಳಿಗೆಪಠ್ಯದಲ್ಲಿ ಆಸಕ್ತಿ ಹೆಚ್ಚಿಸಲುಈ ವಿಧಾನ ಸಹಕಾರಿ.

ಶಿಕ್ಷಕರಿಗೆಒತ್ತಡ ಕಡಿಮೆ

ಮೌಲ್ಯಮಾಪನಸಂದರ್ಭ ಪ್ರತಿ ವಿದ್ಯಾರ್ಥಿಯಪ್ರತಿಕ್ರಿಯೆಯನ್ನು ಲೈವ್ ಗ್ರಾಫ್ಮೂಲಕ ಶಿಕ್ಷಕರು ಅಧ್ಯಯನ ನಡೆಸಬಹುದು.ನಂತರ,ಸಂಗ್ರಹಿತಗ್ರಾಫಿಕಲ್ ವರದಿಗಳ ಮೂಲಕಪ್ರಶ್ನೆಗಳು ಹಾಗೂ ವಿದ್ಯಾರ್ಥಿಗಳಪ್ರತಿಕ್ರಿಯೆಗಳನ್ನೂ ತಾಳೆಮಾಡಬಹುದು.ಈವಿಧಾನದಿಂದ ಶಿಕ್ಷಕರು ತಮ್ಮಮುಂದಿನ ಪಾಠಕ್ಕೆ ತಯಾರಿ ನಡೆಸಲೂಅನುಕೂಲವಾಗುತ್ತದೆ.ಅಧ್ಯಯನದಬಳಿಕ ಶಿಕ್ಷಕರು ಪ್ರತಿ ವಿದ್ಯಾರ್ಥಿಯಪ್ರಗತಿಯನ್ನು ಪರಿಶೀಲಿಸಬಹುದು.ಈತಂತ್ರಜ್ಞಾನ ಶಿಕ್ಷಕರ ಮೇಲಿರುವಒತ್ತಡವನ್ನೂ ಕಡಿಮೆಗೊಳಿಸಲಿದೆ.

ದಿ.ಕೃಷ್ಣಕನ್ನಂತ ಕುಟುಂಬ ನೆರವು

ಕುಂದಾಪುರದಬಸ್ರಿಬೇರು ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ 5ನೇತರಗತಿಯ ವಿಜ್ಞಾನ ಹಾಗೂ ಗಣಿತವಿಷಯಗಳಿಗೆ ಖ್ಟಜಿಔಖ ಆ್ಯಪ್‌ನ್ನುಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.ಈಪ್ರಾಜೆಕ್ಟ್‌ಗೆ ಅಗತ್ಯವುಳ್ಳಲ್ಯಾಪ್‌ಟಾಪ್,ಮೊಬೈಲ್,ವೈಫೈವ್ಯವಸ್ಥೆ ಸಹಿತ ಹಾರ್ಡ್‌ವೇರ್‌ಗಳನ್ನುಕುಡೇರಿ ಮುದೂರಿನ ದಿ.ಕೃಷ್ಣಕನ್ನಂತ ಕುಟುಂಬ ಉಚಿತವಾಗಿಒದಗಿಸಿದೆ.

ಬಸ್ರಿಬೇರುಶಾಲೆಯಲ್ಲಿ ಅನುಷ್ಠಾನ ಯಶಸ್ವಿ

ಜಡ್ಕಲ್ಗ್ರಾಮದ ಬಸ್ರಿಬೇರು ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಯಲ್ಲಿವೆಬ್ ಆಧಾರಿತ ಕಲಿಕಾ ಆ್ಯಪ್ಮಂಗಳವಾರ ಲೋಕಾರ್ಪಣೆಗೊಂಡಿತು.ಆಪ್ನಿರ್ಮಾತೃ ಇಂಜಿನಿಯರ್ ವೀರಮಣಿಶಾಸ್ತ್ರಿ ಚಾಲನೆ ನೀಡಿದರು.ಎಸ್‌ಡಿಎಂಸಿಅಧ್ಯಕ್ಷ ಸತೀಶ ನಾಯ್ಕ ಅಧ್ಯಕ್ಷತೆವಹಿಸಿದ್ದರು.ಗ್ರಾಪಂಸದಸ್ಯೆ ವಿದ್ಯಾವತಿ ಕನ್ನಂತ,ಸಿಆರ್‌ಪಿಶೈಲಜಾ,ಸಲ್ಕೋಡುಶಾಲೆ ಮುಖ್ಯಶಿಕ್ಷಕ ಭಾಸ್ಕರನಾಯ್ಕ,ಮೆಕ್ಕೆಶಾಲೆ ಮುಖ್ಯಶಿಕ್ಷಕ ವಿಶ್ವನಾಥ,ಮಹಾಬಲಪೂಜಾರಿ,ಎಂ.ಜೆ.ಬೇಬಿ,ಅಂಗನವಾಡಿಕಾರ್ಯಕರ್ತೆ ಸುಮತಿ ಇದ್ದರು.ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷಸಂಪತ್ ಕನ್ನಂತ ಪ್ರಾಸ್ತಾವಿಕವಾಗಿಮಾತನಾಡಿದರು.ಮುಖ್ಯಶಿಕ್ಷಕದಿನೇಶ್ ಸ್ವಾಗತಿಸಿದರು.ಅತ್ತಿಕಾಡ್ರಾಮ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net