ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಥಾಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸಂಕೇಶ್ ಫೌಂಡೇಷನ್‌ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ್, ಸುಳ್ಯ ಆರಕ್ಷಕ ಉಪನಿರೀಕ್ಷಕ ಸಂತೋಷ್ ಕುಮಾರ್ ಬಿ.ಪಿ., ಪ್ರೊಬೆಷನರಿ ಎಸ್‌ಐ ಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ವರ್ತಕರ ಸಂಘದ ಗೌರವಾಧ್ಯಕ್ಷ ಸುಧಾಕರ ರೈ ಪಿ.ಬಿ., ಪ್ರಮುಖರಾದ ಎಂ.ಬಿ.ಸದಾಶಿವ, ಡಾ.ರಾಮ್ ಮೋಹನ್, ಲತಾ ಮಧುಸೂದನ್, ಲತಾಶ್ರೀ ಸುಪ್ರೀತ್ ಮೋಂಟಡ್ಕ, ತಾರಾ ಮಾಧವ, ನಾಗವೇಣಿ, ಮನಮೋಹನ ಬಳ್ಳಡ್ಕ,ಭಾಸ್ಕರ ರಾವ್, ಚಂದ್ರಶೇಖರ ಉದ್ದಂತ್ತಡ್ಕ, ಹರೀಶ್ ಬೂಡುಪನ್ನೆ, ದೇವಿಪ್ರಸಾದ್, ಇಬ್ರಾಹಿಂ, ಶಾರೀಖ್ ಡಿ.ಎಂ..ಪ್ರಭಾಕರನ್ ನಾಯರ್ ಸಿ.ಎಚ್, ಸತ್ಯಶಾಂತಿ ತ್ಯಾಗಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಬಂಟ್ವಾಳ್ ಸ್ವಾಗತಿಸಿದರು.