ಬ್ರಾಹ್ಮಣ ಸಂಸ್ಕೃತಿಯ ರಕ್ಷಣೆ ಅಗತ್ಯ

ಉಡುಪಿಯಲ್ಲಿ ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವಾರ್ಷಿಕ ಸಭೆಯಲ್ಲಿ ಸಮಾಜದ ಹಿರಿಯ ದಂಪತಿಯನ್ನು ಸನ್ಮಾನಿಸಿಲಾಯಿತು. ಸಂದೀಪ್​ ಮಂಜ, ಎಂ.ಎನ್​. ರಾಜೇಂದ್ರ, ಶ್ರೀಕಾಂತ್​ ಉಪಾಧ್ಯಾಯ, ಡಾ. ಸೀತಾರಾಮ ಆಚಾರ್ಯ, ರಮೇಶ್​ ರಾವ್​ ಬೀಡು, ಡಾ. ಉಷಾ ಚಡಗ, ಕೆ.ವಿ. ಆಚಾರ್ಯ, ಜನಾರ್ದನ್​ ಭಟ್​, ಮಂಚಿ ಸುರೇಶ್​ ರಾವ್​, ಸುದರ್ಶನ್​ ಆಚಾರ್ಯ ಇದ್ದರು.
ಉಡುಪಿಯಲ್ಲಿ ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವಾರ್ಷಿಕ ಸಭೆಯಲ್ಲಿ ಸಮಾಜದ ಹಿರಿಯ ದಂಪತಿಯನ್ನು ಸನ್ಮಾನಿಸಿಲಾಯಿತು. ಸಂದೀಪ್​ ಮಂಜ, ಎಂ.ಎನ್​. ರಾಜೇಂದ್ರ, ಶ್ರೀಕಾಂತ್​ ಉಪಾಧ್ಯಾಯ, ಡಾ. ಸೀತಾರಾಮ ಆಚಾರ್ಯ, ರಮೇಶ್​ ರಾವ್​ ಬೀಡು, ಡಾ. ಉಷಾ ಚಡಗ, ಕೆ.ವಿ. ಆಚಾರ್ಯ, ಜನಾರ್ದನ್​ ಭಟ್​, ಮಂಚಿ ಸುರೇಶ್​ ರಾವ್​, ಸುದರ್ಶನ್​ ಆಚಾರ್ಯ ಇದ್ದರು.
Published on

* ಜಿಲ್ಲಾಧ್ಯಕ್ಷ ಸಂದೀಪ್​ ಮಂಜ ಅಭಿಪ್ರಾಯ

* ಕಿನ್ನಿಮೂಲ್ಕಿ-ಕನ್ನರ್ಪಾಡಿ ಸಂಘದ ವಾರ್ಷಿಕ ಸಭೆ

ಉಡುಪಿ: ಪ್ರಸ್ತುತ ಸ್ಥಿತಿಗತಿ ಅವಲೋಕಿಸಿದಾಗ ಮುಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಅಳಿಯುವ ಭೀತಿ ಇದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಂಸ್ಕೃತಿಯ ರಕ್ಷಣೆಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಅಗತ್ಯತೆ ಇದೆ. ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ನಮ್ಮತನದ ಬಗ್ಗೆ ಆಸಕ್ತಿ ಮೂಡಿಸಿ, ಅದನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಸಂಸ್ಕೃತಿ-ಸಂಸ್ಕಾರಗಳ ಪಾಠ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಸಂದೀಪ್​ ಮಂಜ ಅಭಿಪ್ರಾಯಪಟ್ಟರು.
ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಶ್ರೀದೇವಿ ಸಭಾಭವನದಲ್ಲಿ ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸನ್ಮಾನ

ದಿವ್ಯಾಂಗರಾಗಿದ್ದರೂ ಸಾಧನೆಗೈದ ಹರೀಶ್​ ಭಟ್​ ಅವರನ್ನು ಸನ್ಮಾನಿಸಲಾಯಿತು. ದಾಂಪತ್ಯ ಜೀವನದಲ್ಲಿ ಸುವರ್ಣ ಮಹೋತ್ಸವ ಕಂಡ ಹತ್ತು ದಂಪತಿಯನ್ನು ಗೌರವಿಸಲಾಯಿತು. ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಕಾಂತ್​ ಉಪಾಧ್ಯಾಯ, ಕಾಪು ದಂಡತೀರ್ಥ ಡಾ. ಸೀತಾರಾಮ ಆಚಾರ್ಯ, ರಮೇಶ್​ ರಾವ್​ ಬೀಡು ಉಪಸ್ಥಿತರಿದ್ದರು.
ಮಹಿಳಾ ವಲಯದ ಅಧ್ಯಕ್ಷೆ ಡಾ. ಉಷಾ ಚಡಗ, ಕೆ.ವಿ. ಆಚಾರ್ಯ, ಜನಾರ್ದನ್​ ಭಟ್​, ಮುರಳಿ ಕೃಷ್ಣ ಭಟ್​, ವಿಜಯಲಕ್ಷ್ಮೀ ಕಿರಣ್​, ಬೃಂದಾ ರಾಜೇಂದ್ರ ಹಾಗೂ ಪದಾಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಎಂ.ಎನ್​. ರಾಜೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಕಾರ್ಯದರ್ಶಿ ಮಂಚಿ ಸುರೇಶ್​ ರಾವ್​ ವಾರ್ಷಿಕ ವರದಿ ವಾಚಿಸಿದರು. ಸುದರ್ಶನ್​ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಹಿರಿಯ ಪತ್ರಕರ್ತ ಕಿರಣ್​ ಮಂಜನಬೈಲ್​ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net