ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಲಾರಿಯಲ್ಲಿ 320 ಪ್ಲಾಸ್ಟಿಕ್ ಬಿಳಿ ಚೀಲಗಳಲ್ಲಿ ತುಂಬಿದ್ದ ಅಂದಾಜು ರೂ. 3,84,000 ಮೌಲ್ಯದ ಒಟ್ಟು 160 ಕ್ವಿಂಟಾಲ್ ಉಚಿತ ಪಡಿತರ ಅಕ್ಕಿ ಪತ್ತೆಯಾಗಿದೆ. ಕುಮಟಾದ ನಾದಮಸ್ಕಿರಿಯಲ್ಲಿರುವ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಿಕ ನಾಗರಾಜ್ ನಾಯ್ಕ್ ಅವರು ಈ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿಸಿದ್ದು, ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಇದನ್ನು ಕೇರಳದ ಕಾಸರಗೋಡಿನಲ್ಲಿರುವ ಶಾಜಿ ಟ್ರೇಡಿಂಗ್ ಕಂಪೆನಿಗೆ ಅಕ್ರಮವಾಗಿ ಸಾಗಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ.