

ದೇವಸ್ಥಾನ ಸಂಪೂರ್ಣ ಅಜೀರ್ಣಾವಸ್ಥೆ ತಲುಪಿದ್ದು, ಪೂಜೆ ಮಾಡುವುದು ಕಷ್ಟಕರ ಎಂದು ಪುರೋಹಿತರು ತಿಳಿಸಿದರು. ಅದಕ್ಕಾಗಿ ಆರೂಢ ಪ್ರಶ್ನೆಗೆ ನಿರ್ಧರಿಸಲಾಯಿತು. ಪ್ರಶ್ನೆಯಲ್ಲಿ ಆಂಜನೇಯ ಬಂಡೆ ಹಾಗೂ ಸನ್ಯಾಸಿ ಸಮಾಧಿ ಚಕ್ರಾ ನದಿ ದಂಡೆಯಲ್ಲಿ ಪತ್ತೆಯಾಗಿದೆ. ದೇವಸ್ಥಾನದ ಮೂಲದವರು ಅಭಿವೃದ್ಧಿಗೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ. ದೇವರ ಇಚ್ಛೆಯಂತೆ ಊರವರೆಲ್ಲರ ಸಹಕಾರದಿಂದ ಅಭಿವೃದ್ಧಿಪಡಿಸುವ ಚಿಂತನೆಯಿದೆ.