

ಗುರುಪುರ: ಈ ವಾರ್ಡ್‌ನಲ್ಲಿ ತಲಾ 20 ಲಕ್ಷ ರೂ ಅನುದಾನದಲ್ಲಿ 2 ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಶೀಘ್ರ ಮತ್ತೊಂದು ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಾಣ ಕಾರ್ಯವೂ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಅನುದಾನ ಸಿಕ್ಕಿದೆ. ಇಲ್ಲಿ 20 ಸೆಂಟ್ಸ್ ಜಾಗ ಕಾದಿರಿಸುವಲ್ಲಿ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್ ಅವರ ಶ್ರಮವಿದೆ ಎಂದು ಶಾಸಕ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.