

ಕಾಸರಗೋಡು: ಕೂಡ್ಲು ಸಮೀಪ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿರ್ಜನ ಪ್ರದೇಶದಲ್ಲಿ ದಾಸ್ತಾನಿರಿಸಿದ್ದ 86.400 ಲೀಟರ್ ಆಂಧ್ರಪ್ರದೇಶ ನಿರ್ಮಿತ ಮದ್ಯ ವಶಪಡಿಸಿಕೊಂಡಿದ್ದಾರೆ.
ಕೂಡ್ಲು ಉಳಿಯತ್ತಡ್ಕ-ಚೌಕಿ ರಸ್ತೆಯ ನೇಶನಲ್ ನಗರದಲ್ಲಿರುವ ಗ್ರಾಮ ಕಚೇರಿಗೆ ಸಮೀಪದ ನಿರ್ಜನ ಪ್ರದೇಶದ ಹಿತ್ತಲಿನಲ್ಲಿ ಹತ್ತು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ ತುಂಬಿಸಿಡಲಾಗಿದ್ದ 180 ಎಂಎಲ್‌ನ 480 ಬಾಟಲಿ ಮದ್ಯ ಪತ್ತೆಯಾಗಿದೆ.
ಮದ್ಯವನ್ನು ಹೊರ ರಾಜ್ಯಗಳಿಂದ ವಾಹನಗಳಲ್ಲಿ ತಂದು ದಾಸ್ತಾನಿರಿಸಿ ಬಿಡಿ ಮದ್ಯ ಮಾರಾಟಗಾರರಿಗೆ ವಿತರಿಸುವ ಜಾಲ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಾಸರಗೋಡು ನಗರ ಠಾಣೆ ಎಸ್‌ಐ ಮನು ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.