

ಎರಡು ತಿಂಗಳಿನಿಂದ ಕುಂಠಿತಗೊಂಡಿದ್ದ ಮೀನುಗಾರಿಕೆಗೆ, ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಭಾರಿ ಗಾಳಿ ಹಾಗೂ ಮೀನಿನ ಕೊರತೆ ಮತ್ತೆ ಹೊಡೆತ ನೀಡಿದೆ. ಹದಿನೈದು ದಿನಗಳಿಂದ ಮೀನುಗಳು ಹೇರಳವಾಗಿ ಸಿಗದ ಕಾರಣ ಹೆಚ್ಚಿನ ಬೋಟು, ದೋಣಿಗಳು ಕರಾವಳಿಯ ಬಹುತೇಕ ಎಲ್ಲ ಬಂದರುಗಳಲ್ಲಿಯೇ ಲಂಗರು ಹಾಕಿವೆ. ಕಡಲಿಗಿಳಿದರೂ ನಿರೀಕ್ಷೆಯಷ್ಟು ಮೀನು ಸಿಗದೆ ಬರಿಗೈಯಲ್ಲಿ ವಾಪಾಸಾಗುತ್ತಿದ್ದರೆ, ಕೆಲವು ದೋಣಿಗಳಂತೂ ಈ ವರ್ಷದ ಮೀನುಗಾರಿಕೆಗೆ ನಾಲ್ಕು ತಿಂಗಳು ಮೊದಲೇ ಬಹುತೇಕ ಮುಕ್ತಾಯ ಹಾಡಿವೆ.
ನಮ್ಮಲ್ಲಿ ಉತ್ತರ ಭಾರತದ ಬಹುತೇಕ ಕಾರ್ಮಿಕರು ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ತಮ್ಮ ಊರಿನ ಉತ್ಸವಗಳಿಗೆ ತೆರಳಿದ್ದಾರೆ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದೆ. ಬೋಟುಗಳಲ್ಲಿ ಕೆಲಸಗಾರರ ಕೊರತೆ ಒಂದು ಪ್ರಮುಖ ಕಾರಣ. ಪರ್ಸಿನ್ ಬೋಟುಗಳಿಗೆ ಮಾತ್ರ ಗಾಳಿ ಬಂದರೆ ಕಷ್ಟ. ಹೀಗಾಗಿ ಆ ಬೋಟುಗಳು ದಡ ಸೇರಿವೆ.