ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಅನಂತ ಅಂಬಾನಿ ಭಾನುವಾರ ಭೇಟಿ ನೀಡಿದರು. ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರುರಾಮ ದೇವಾಡಿಗ, ಸುರೇಂದ್ರ ಶೆಟ್ಟಿ, ಯು.ರಾಜೇಶ್ ಕಾರಂತ್, ಅಭಿಲಾಶ್ ಪಿ.ವಿ. ಮೊದಲಾದವರು ಇದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ ಅಂಬಾನಿ ಅವರು ಕುಟುಂಬದ ಗುರೂಜಿ ಜತೆ ಭಾನುವಾರ ರಾತ್ರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುವಾರ್ ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ದೇವಳದ ಪರವಾಗಿ ಸನ್ಮಾನಿಸಿದರು. ಮೊದಲು ಅನಂತ ಅಂಬಾನಿ ಅವರನ್ನು ದೇವಳದ ಮುಂಭಾಗದಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಪ್ರಧಾನ ಅರ್ಚಕ ಡಾ.ಕೆ.ರಾಮಚಂದ್ರ ಅಡಿಗ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅನಂತ್ ಅಂಬಾನಿ ಅವರ ಕೊಲ್ಲೂರು ಭೇಟಿ ಮೊದಲು ಜೂನ್ 13ರಂದು ನಿಗದಿಯಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಮುಂಬೈನಿಂದ ವಿಮಾನ ಸಂಚಾರ ಸಾಧ್ಯವಾಗದೆ ಅವರ ಕೊಲ್ಲೂರು ಭೇಟಿಯನ್ನು ಒಂದು ದಿನ ಮುಂದೂಡಲಾಗಿತ್ತು.
ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರುರಾಮ ದೇವಾಡಿಗ, ಸುರೇಂದ್ರ ಶೆಟ್ಟಿ, ಯು.ರಾಜೇಶ್ ಕಾರಂತ್, ಅಭಿಲಾಶ್ ಪಿ.ವಿ. ಮೊದಲಾದವರು ಇದ್ದರು.
ಹಲವು ದೇವಸ್ಥಾನ ದರ್ಶನ
ಅನಂತ್ ಅಂಬಾನಿಗೆ ದೇವರ ಮೇಲೆ ಅಪಾರ ನಂಬಿಕೆ ಹಾಗೂ ಭಕ್ತಿ ಇದೆ. ಇತ್ತೀಚೆಗೆ ಅನಂತ್ ಅಂಬಾನಿ ಸತತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಕೇರಳದ ಹಲವು ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ತಿರುಪತಿಗೆ ಕುಟುಂಬ ಸಮೇತ ತೆರಳಿ ಪೂಜೆ ಸಲ್ಲಿಸಿದ್ದರು. ಇದೀಗ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದಿದ್ದಾರೆ.