ಒಗ್ಗಟ್ಟಿನಿಂದ ಮುನ್ನಡೆದರೆ ಸಂಸ್ಥೆ ಬಾಳಿಕೆ

 ‘ಆಟಿಡೊಂಜಿ ಕೂಡಾಟಿಕೆ’ಯನ್ನು  ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೌರವಾಧ್ಯಕ್ಷ ಆನಂದ ಕೆ.ಅಸೈಗೋಳಿ, ಕೊಂಡಾಣ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಮಾಜಿ ಟ್ರಸ್ಟಿ ಚಿದಾನಂದ ಪೂಜಾರಿ ಉಪಸ್ಥಿತರಿದ್ದರು.
‘ಆಟಿಡೊಂಜಿ ಕೂಡಾಟಿಕೆ’ಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೌರವಾಧ್ಯಕ್ಷ ಆನಂದ ಕೆ.ಅಸೈಗೋಳಿ, ಕೊಂಡಾಣ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಮಾಜಿ ಟ್ರಸ್ಟಿ ಚಿದಾನಂದ ಪೂಜಾರಿ ಉಪಸ್ಥಿತರಿದ್ದರು.
Published on

ಉಳ್ಳಾಲ: ಯಾವುದೇ ಸಂಸ್ಥೆ ಸುದೀರ್ಘ ಕಾಲ ಬಾಳಿಕೆ ಬರಬೇಕಾದರೆ ಎಲ್ಲರನ್ನು ಒಟ್ಟಾಗಿ ಕಾರ್ಯ ನಿರ್ವಹಿಸಿಕೊಂಡು ಮುನ್ನಡೆಯುವುದು ಅಗತ್ಯ ಎಂದು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅಭಿಪ್ರಾಯಪಟ್ಟರು.


ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಐದನೇ ವರ್ಷದ ‘ಆಟಿಡೊಂಜಿ ಕೂಡಾಟಿಕೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಮಾತನಾಡಿದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು.

ಕೊಂಡಾಣ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಮಾಜಿ ಟ್ರಸ್ಟಿ ಚಿದಾನಂದ ಪೂಜಾರಿ, ಭಗತ್‌ಸಿಂಗ್ ಸೇವಾ ಪ್ರತಿಷ್ಠಾನ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ಮುನ್ನೂರು ಯುವಕ ಮಂಡಲ ಅಧ್ಯಕ್ಷ ಹರೀಶ್ ಮುಂಡೋಳಿ, ಕಲಾವಿದ ದಿನೇಶ್ ಅತ್ತಾವರ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಲಕ್ಷ್ಮಣ ಪೂಜಾರಿ, ರಾಜೇಶ್ ಕೆರೆಬೈಲು, ಪ್ರಕಾಶ್ ಸಿಂಫೋನಿ, ರಚೆಲ್ ಪ್ರಕಾಶ್, ಪ್ರಮುಖರಾದ ಮೋಹನ್ ಸಾಲ್ಯಾನ್, ರಾಜೇಂದ್ರ ಸೇವಂತಿಗುಡ್ಡೆ, ಶಿವಾಜಿ ಕುತ್ತಾರು, ನವೀನ್ ಎ.ಕೆ., ರಮೇಶ್ ಸಾಮಾನಿ, ವಿಶ್ವನಾಥ ಎಲ್ಯಾರ್ ಪದವು, ಸತೀಶ್ ಪೂಜಾರಿ, ಶರತ್ ಭಂಡಾರಿ, ಲಕ್ಷ್ಮೀನಾರಾಯಣ, ಸುಧಾಕರ ಬಜಾಲ್, ಚಂದ್ರಶೇಖರ ಕೊಲ್ಯ, ನಾಗೇಶ್ ಬೆಳ್ಮ, ಪ್ರವೀಣ್ ರೈ, ಗಂಗಾಧರ ಅಂಬ್ಲಮೊಗರು, ರಾಜೇಶ್, ನವೀನ್ ಅಂಬ್ಲಮೊಗರು, ಸೂರಜ್ ಗಟ್ಟಿ, ಪ್ರಭಾಕರ ಮಡ್ಯಾರ್, ರಾಮಚಂದ್ರ ಶೆಟ್ಟಿ, ರವೀನಾ ಕುಲಾಲ್, ಕಿಶೋರ್ ಮುನ್ನೂರು, ಪ್ರತೀಕ್ ನಡಾರ್, ಸಮೃದ್ಧ್ ಭಂಡಾರಿ, ಚಿರಾಗ್ ನಡಾರ್, ಶ್ರವಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ದಾಮೋದರ ನಡಾರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net