ನ್ಯಾಯ ಕೊಡಲು ಮುಕ್ತ ವಾತಾವರಣ ಅವಶ್ಯ

ನೂತನ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಸಭಾ ಕಾರ್ಯಕ್ರಮ ನ್ಯಾಯಾಧೀಶ ನರೇಂದ್ರ ಪ್ರಸಾದ್ ಉದ್ಘಾಟಿಸಿದರು. ಬಸವರಾಜ್, ವಿಶ್ವಜಿತ್ ಶೆಟ್ಟಿ, ರಾಜೇಶ್ ರೈ ಕೆ., ತ್ಯಾಗರಾಜ ಎನ್.ಇನವಳ್ಳಿ ಮೊದಲಾದವರಿದ್ದರು.
ನೂತನ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಸಭಾ ಕಾರ್ಯಕ್ರಮ ನ್ಯಾಯಾಧೀಶ ನರೇಂದ್ರ ಪ್ರಸಾದ್ ಉದ್ಘಾಟಿಸಿದರು. ಬಸವರಾಜ್, ವಿಶ್ವಜಿತ್ ಶೆಟ್ಟಿ, ರಾಜೇಶ್ ರೈ ಕೆ., ತ್ಯಾಗರಾಜ ಎನ್.ಇನವಳ್ಳಿ ಮೊದಲಾದವರಿದ್ದರು.
Published on
ಬೆಳ್ತಂಗಡಿ: ನ್ಯಾಯ ಕೊಡಲು ಮುಕ್ತವಾದ ವಾತಾವರಣ ಇರಬೇಕು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನ್ಯಾಯಾಲಯದ ಕಟ್ಟಡವಾಗಿದೆ. ಕಟ್ಟಡ ಚೆನ್ನಾಗಿದ್ದು, ಅಲ್ಲಿನ ವಾತಾವರಣ ಉತ್ತಮವಾಗಿದ್ದಾಗ ನ್ಯಾಯಾಧೀಶರು, ವಕೀಲರು ಕೆಲಸ ಮಾಡಲು ಅನುಕೂಲವಾಗುತ್ತದೆ.
ಸಾರ್ವಜನಿಕರ ಮನೆಯಾದ ನ್ಯಾಯಾಲಯ ಕಟ್ಟಡ ಎಲ್ಲಿಯೂ ಕಳಪೆಯಾಗದಂತೆ ವಕೀಲರ ಸಂಘ ಹಾಗೂ ಎಲ್ಲ ವಕೀಲರು ಮನೆಯಂತೆ ಕಟ್ಟಡ ಕಾಮಗಾರಿ ಗಮನಿಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ದ.ಕ.ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.
ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ನೂತನ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ, ರಾಜೇಶ್ ರೈ ಕೆ., ತ್ಯಾಗರಾಜ ಎನ್.ಇನವಳ್ಳಿ, ಮುರಳೀಧರ ಪೈ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಪ್ರತಾಪಸಿಂಹ ನಾಯಕ್, ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯ ಪಿ.ಪಿ.ಹೆಗ್ಡೆ ಇದ್ದರು.
ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಅಲೋಸಿಯಸ್ ಲೋಬೋ ಸ್ವಾಗತಿಸಿದರು. ಹಿರಿಯ ವಕೀಲ ಧನಂಜಯ ರಾವ್ ಹಾಗೂ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ವಂದಿಸಿದರು.

ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಹೈಕೋರ್ಟ್, ನ್ಯಾಯಾಧೀಶರು ಮತ್ತು ವಕೀಲ ವೃತ್ತಿಗೆ ವಿಶೇಷ ಗೌರವವಿದೆ. ಬೆಳ್ತಂಗಡಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡುವುದು. ಶಿಕ್ಷಣ, ಆರೋಗ್ಯ, ಕಾನೂನು ಕ್ಷೇತ್ರ ಎಲ್ಲದಕ್ಕೂ ಸುಸಜ್ಜಿತ ಸವಲತ್ತು ಕೊಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಸರ್ಕಾರ 9 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಾಕಿ ಉಳಿದ ಮೊತ್ತ ಕೆಲಸ ಪೂರ್ತಿಯಾಗುವ ಮುಂಚಿತವಾಗಿಯೇ ಬಿಡುಗಡೆ ಮಾಡುತ್ತೇವೆ.

— ಯು.ಟಿ.ಖಾದರ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ

ನ್ಯಾಯಾಲಯ ನ್ಯಾಯ ನೀಡುವ ದೇಗುಲ. ಉತ್ತಮ ನ್ಯಾಯಾಧೀಶರಿಗೆ ಕೊರತೆಯಿಲ್ಲ. ಆದರೆ ಅವರಿಗೆ ಉತ್ತಮ ಸೌಕರ್ಯ ನೀಡುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ಕೆಲವೊಮ್ಮೆ ನ್ಯಾಯ ವಿಳಂಬವಾಗುತ್ತಿದೆ. ನ್ಯಾಯ ಬೇಡಿಕೊಂಡು ಬರುವವರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು.

— ಮಹಮ್ಮದ್ ನವಾಜ್, ಹೈಕೋರ್ಟ್ ನ್ಯಾಯಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net