ಶ್ರೀಕೃಷ್ಣನ ಆದರ್ಶ ಪಾಲನೆ

ಮುದ್ದುಕೃಷ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶ್ರೀಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿ ಅಧ್ಯಕ್ಷ ರವಿ ರೈ ಫಜೀರು, ಗೌರವಾಧ್ಯಕ್ಷ ಪ್ರಕಾಶ್ ಸಿಂಪೋನಿ, ಸಲಹೆಗಾರ ನರೇಶ್ ಬಬ್ಬುಕಟ್ಟೆ, ಶ್ರುತಿ ಲಯ ಕಲಾಕೇಂದ್ರದ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್ ಇನ್ನಿತರರು ಉಪಸ್ಥಿತರಿದ್ದರು.

Published on

ಉಳ್ಳಾಲ: ಮುದ್ದುಕೃಷ್ಣ ಸ್ಪರ್ಧೆ ಮೂಲಕ ಎಳವೆಯಲ್ಲೇ ಶ್ರೀಕೃಷ್ಣ ಪರಮಾತ್ಮನ ಆದರ್ಶ ಪಾಲನೆಯ ಪ್ರೇರಣೆಯೊಂದಿಗೆ ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸಿ ಕೊಟ್ಟಂತಾಗುತ್ತದೆ ಎಂದು ಶ್ರೀಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿ ಅಧ್ಯಕ್ಷ ರವಿ ರೈ ಫಜೀರು ಅಭಿಪ್ರಾಯಪಟ್ಟರು.

ಕುತ್ತಾರ್ ಶೃತಿಲಯ ಕಲಾ ಕೇಂದ್ರ ಮತ್ತು ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿಯಿಂದ ನಡೆಯಲಿರುವ ಮುದ್ದುಕೃಷ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಗೌರವಾಧ್ಯಕ್ಷ ಪ್ರಕಾಶ್ ಸಿಂಪೋನಿ, ಸಲಹೆಗಾರ ನರೇಶ್ ಬಬ್ಬುಕಟ್ಟೆ, ಶ್ರುತಿ ಲಯ ಕಲಾಕೇಂದ್ರ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್, ಮಹಿಳಾ ಕಲಾ ಕೇಂದ್ರ ಅಧ್ಯಕ್ಷೆ ಶೋಭಾ ಶೆಟ್ಟಿ, ನಿರ್ದೇಶಕರಾದ ಭಾಸ್ಕರ್ ಕುತ್ತಾರ್, ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ, ಕೋಶಾಧಿಕಾರಿ ನವೀನ್ ಕುತ್ತಾರ್, ಉಪಾಧ್ಯಕ್ಷರಾದ ಭೋಜಾನಂದ ಬಾಳೆಪುಣಿ, ಶಿವಕುಮಾರ್ ಟಿ.ಹರೇಕಳ, ಶ್ರೀದೇವಿ ರೈ, ಭಾರತಿ ಶೆಟ್ಟಿ, ಚಂದ್ರಕಲಾ ಎಸ್., ಪೂಜಾ ಶೆಟ್ಟಿ, ನಾಗವೇಣಿ ಶೆಟ್ಟಿ, ರಶ್ಮಿ, ಸೋನಿ ರೈ, ಚಂದ್ರಕಲಾ ಶೆಟ್ಟಿ, ಸಂಚಾಲಕರಾದ ರಾಜೇಶ್ ಆಚಾರ್ಯ, ದೇವಿಪ್ರಸಾದ್ ರೈ, ಜತೆ ಕಾರ್ಯದರ್ಶಿ ಅಭಿಷೇಕ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಭಾಸ್ಕರ್ ರಾವ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net