ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಚಿನ್ನಾಭರಣವನ್ನು ನಾಗೇಶ್ ಅವರಿಗೆ ಹಸ್ತಾಂತರಿಸಿದರು. ಮೂಲ್ಕಿ ನಪಂ ಮಾಜಿ ಸದಸ್ಯರಾದ ಪುತ್ತುಬಾವ, ಬಾಲಚಂದ್ರ ಕಾಮತ್, ನಪಂ ಸಿಬ್ಬಂದಿ ನವೀನ್ ಚಂದ್ರ, ಕಿಶೋರ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಚಿನ್ನಾಭರಣವನ್ನು ನಾಗೇಶ್ ಅವರಿಗೆ ಹಸ್ತಾಂತರಿಸಿದರು. ಮೂಲ್ಕಿ ನಪಂ ಮಾಜಿ ಸದಸ್ಯರಾದ ಪುತ್ತುಬಾವ, ಬಾಲಚಂದ್ರ ಕಾಮತ್, ನಪಂ ಸಿಬ್ಬಂದಿ ನವೀನ್ ಚಂದ್ರ, ಕಿಶೋರ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.
Published on

ಮೂಲ್ಕಿ: ಮೂಲ್ಕಿ ನಪಂ ವತಿಯಿಂದ ಮನೆ ಮನೆ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡುತ್ತಿರುವಾಗ ಮೂಲ್ಕಿ ನಪಂ ಕಸ ಸಂಗ್ರಹಣೆ ಮಾಡುವ ವಾಹನ ಚಾಲಕ ಗೋಪಾಲ ಎಂಬುವರಿಗೆ 2.5 ಪವನ್ ಚಿನ್ನಾಭರಣ ದೊರೆತಿದ್ದು, ಕೂಡಲೇ ಅವರು ನಪಂ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್ ಕಾರ್ಯಪ್ರವೃತ್ತರಾಗಿ ಚಿನ್ನಾಭರಣ ಕಳೆದು ಹೋದ ವಾರಸುದಾರರ ಬಗ್ಗೆ ಗುರುತಿಸಿ ಮಾಹಿತಿ ಪಡೆದು ಬಪ್ಪನಾಡು ಬಡಗುಹಿತ್ಲು ನಿವಾಸಿ ನಾಗೇಶ್ ಎಂಬುವರನ್ನು ನಪಂ ಕಚೇರಿಗೆ ಕರೆಸಿ ಪೌರಕಾರ್ಮಿಕ ನಾಗೇಶ್ ಸಮಕ್ಷಮದಲ್ಲಿ 3 ಲಕ್ಷ ಮೌಲ್ಯದ 2.5 ಪವನ್ ಚಿನ್ನಾಭರಣವನ್ನು ನಾಗೇಶ್ ಅವರಿಗೆ ಹಸ್ತಾಂತರಿಸಿದರು.
ಮೂಲ್ಕಿ ನಪಂ ಮಾಜಿ ಸದಸ್ಯರಾದ ಪುತ್ತುಬಾವ, ಬಾಲಚಂದ್ರ ಕಾಮತ್, ನಪಂ ಸಿಬ್ಬಂದಿ ನವೀನ್ ಚಂದ್ರ, ಕಿಶೋರ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net