ಸದರಿ ಪ್ರಕರಣದ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸಖಿ ಸೆಂಟರ್ಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ವೃದ್ಧೆಯು, ತನ್ನ ಹೆಸರು ರಂಗಮ್ಮ ಕೋಂ. ಮಾಂಗ್ಯಾ ಎಂದು ತಿಳಿಸಿ, ಪತಿ ನಿಧನರಾಗಿರುವುದಾಗಿ ಹಾಗೂ ಭದ್ರಮ್ಮ ಮತ್ತು ಸುಮನ್ ಎಂಬ ಇಬ್ಬರು ಮಕ್ಕಳಿದ್ದಾರೆಂದು ಮಾಹಿತಿ ನೀಡಿದರು. ತನ್ನ ಮೂಲ ನಿವಾಸ ನಗರಂ ಕಾಲೋನಿ, ತೆಲಂಗಾಣವಾಗಿದೆ. ಎರಡು ವರ್ಷದಿಂದ ಮಕ್ಕಳೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದ್ದರು.