ಪರಿಚಯದ ಗಣೇಶ್ ಅವರ ಮೂಲಕ ಶ್ರೀನಿವಾಸ ಅವರು ಬಾವಿಯಲ್ಲಿ ಇರುವುದು ತಿಳಿಯಿತು. ಕೂಡಲೇ ಸ್ಥಳೀಯರು ಬಾವಿಗೆ ಏಣಿ ಹಾಕಿ ಅವರನ್ನು ಮೇಲಕ್ಕೆ ಬರಲು ಹೇಳಿದರು. ಆದರೆ, ಮೂರು ದಿನದಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದರಿಂದ ಅವರಿಗೆ ಮೇಲೆ ಬರಲು ಆಗಲಿಲ್ಲ. ಹೀಗಾಗಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ಕರೆಸಲಾಯಿತು. ಸೋಮವಾರ (ಏ.5) ರಾತ್ರಿ 9 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತೀಶ್, ಅಶ್ವಿನ್ ಸನಿಲ್, ಚಾಲಕ ಭರತ್ ಎನ್., ಫೈರ್ ಫೈಟರ್ಗಳಾದ ಗಣೇಶ್ ವಿ., ಮಹಾಂತೇಶ್ ಅವರು ಸ್ಥಳೀಯರ ಸಹಕಾರದಿಂದ ಬಾವಿಯೊಳಗೆ ಇಳಿದು ಶ್ರೀನಿವಾಸ ಆಚಾರ್ಯ ಅವರನ್ನು ರಕ್ಷಿಸಿ, ಮೇಲಕ್ಕೆ ತಂದರು. ಬಳಿಕ ರಾತ್ರಿ 9.50ರ ವೇಳೆಯಲ್ಲಿ ಆಂಬುಲೆನ್ಸ್ ಮೂಲಕ ಸ್ಥಳಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.