

ವಿಜಯವಾಣಿಸುದ್ದಿಜಾಲ ಕುಂದಾಪುರ
ಶ್ರಮ,ಭರವಸೆ,ಪ್ರೀತಿಯೊಂದಿಗೆಬಹುತ್ವವೇ ದೇಶದ ಉಸಿರಾಗಿದೆ.ನಮ್ಮನ್ನೇನಾವು ಪ್ರಶ್ನೆ ಮಾಡಿಕೊಳ್ಳುವಸೂಕ್ಷ್ಮತೆಯಿಂದ ನಮ್ಮೆದುರಿನಸಮಾಜ ಕಟ್ಟುವ ಕೆಲಸ ಮಾಡಬೇಕು.ವರ್ತಮಾನದತಲ್ಲಣಗಳೇ ಇಲ್ಲಿನ ಕವಿತೆಗಳಲ್ಲಿಕಾಣುವ ಪ್ರಮುಖ ಅಂಶ.ಈಕೃತಿ ಸ್ವಾತಂತ್ರೃ,ಸಹಬಾಳ್ವೆಯೊಂದಿಗೆಸಾಂಸ್ಕೃತಿಕ ಅರಿವು ಮೂಡಿಸುವಪ್ರಯತ್ನ ಮಾಡಿದೆ ಎಂದು ನಿವೃತ್ತಪ್ರಾಧ್ಯಾಪಕಿ ರೇಖಾ ಜಿ.ಬನ್ನಾಡಿಹೇಳಿದರು.
ಮಂಗಳೂರುಬಹು ಓದು ಬಳಗ,ಮಂಗಳೂರುಆಕೃತಿ ಆಶಯ ಪ್ರಕಾಶನ ಆಶ್ರಯದಲ್ಲಿತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿಪ್ರೊ.ರಾಘವೇಂದ್ರಹೇರ್ಳೆ ಗಿಳಿಯಾರು,ಡಾ.ಶ್ರೀನಿವಾಸಗಿಳಿಯಾರು,ಡಾ.ಕೃಷ್ಣರಾಜಕರಬ ಉಳ್ತೂರು ಅವರ ಮಿತ್ರತ್ವದನೆನಪಿಗಾಗಿ ರಚಿಸಲ್ಪಟ್ಟ ‘ಬತ್ತದಚಿತ್ರಗಳು’ಕವನಸಂಕಲನಬಿಡುಗಡೆಗೊಳಿಸಿ ಮಾತನಾಡಿದರು.
ಯಲ್ಲಾಪುರದವಿಶ್ವದರ್ಶನ ಪದವಿ ಪೂರ್ವ ಕಾಲೇಜುಪ್ರಾಂಶುಪಾಲ ಡಾ.ದತ್ತಾತ್ರೇಯಗಾಂವ್ಕರ್ ಕೃತಿ ಪರಿಚಯ ಮಾಡಿದರು.
ಸಾಹಿತಿಪ್ರೊ.ಉಪೇಂದ್ರಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಅತಿಥಿಗಳಾಗಿದ್ದ ಚಿಂತಕ ಡಾ.ಹಯವದನಉಪಾಧ್ಯ,ನಿವೃತ್ತಮುಖ್ಯಶಿಕ್ಷಕ ಬಿ.ರಾಜೀವಶೆಟ್ಟಿ ಬೇಳೂರು ಮಾತನಾಡಿದರು.ಡಾ.ಶ್ರೀನಿವಾಸಗಿಳಿಯಾರ್ ಪ್ರಾಸ್ತಾವಿಕವಾಗಿಮಾತನಾಡಿದರು.
ಡಾ.ಕೃಷ್ಣರಾಜಕರಬ ಕವಿತೆ ಹುಟ್ಟಿದ ಬಗೆಯ ಬಗ್ಗೆಅನಿಸಿಕೆ ಹಂಚಿಕೊಂಡರು.ಡಾ.ಆಶಾಲತಾಚೇವಾರ್ ಕಾರ್ಯಕ್ರಮ ನಿರೂಪಿಸಿದರು.ಮಂಗಳೂರುಬಹು ಓದು ಬಳಗ ಸಂಚಾಲಕ ಡಾ.ಸತೀಶ್ಚಿತ್ರಾಪು ವಂದಿಸಿದರು.