

ರಂಗಭೂಮಿ ನಮ್ಮೊಳಗಿನ ಸಂತೋಷ, ನೋವು, ಹತಾಶೆಯನ್ನು ಪ್ರಕಟಿಸುವ ಜತೆಗೆ ವ್ಯಕ್ತಿತ್ವ ರೂಪಿಸುವ ಪ್ರಬಲ ಮಾಧ್ಯಮ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಕೇವಲ ಹವ್ಯಾಸವಾಗಿ ಉಳಿಯದೆ ಅದೊಂದು ಸಾಮಾಜಿಕ ಬದ್ಧತೆಯಾಗಿರಬೇಕು. ಇತಿಹಾಸ, ವರ್ತಮಾನದಲ್ಲಿ ಸಾಕಷ್ಟು ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳನ್ನು ಹುಟ್ಟು ಹಾಕಿದ ರಂಗಭೂಮಿಯ ಭವ್ಯ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು.