

ಗುರುಪುರ: ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಕೃಷಿ ಪರಂಪರೆಯ ಹಿನ್ನೆಲೆಯಲ್ಲಿ ಇಂದು ಕೆಸರ್‌ಡೊಂಜಿ ದಿನ, ಕೆಸರ‌್ದ ಗೊಬ್ಬು ನಡೆಯುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಮಣ್ಣಿನ ಸಂಸ್ಕೃತಿಯ ಮಹತ್ವ ತಿಳಿಸಿ ಕೊಡಲು ಪ್ರಯತ್ನಿಸುತ್ತಿದ್ದೇವೆ.
ದೈವಾರಾಧನೆಯಲ್ಲಿ ನಿರ್ದಿಷ್ಟ ಸ್ಥಾನಮಾನ ಕಂಡುಕೊಂಡಿರುವ ಮಡಿವಾಳ ಸಮಾಜ ಇನ್ನಷ್ಟು ಬಲಿಷ್ಟಗೊಳ್ಳಬೇಕು ಎಂದು ದೋಣಿಂಜೆಗುತ್ತಿನ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ ಹೇಳಿದರು.