

ಕಂದಾಯ ಇಲಾಖೆಯನ್ನು ಅಧುನೀಕರಣಗೊಳಿಸಿ ಭ್ರಷ್ಟಾಚಾರ ಮುಕ್ತವಾಗುವಂತೆ ರೂಪಿಸುವಲ್ಲಿ ಕೃಷ್ಣ ಬೈರೇಗೌಡರ ಕಾರ್ಯ ಅಭಿನಂದನೀಯ. ಮುಂದಿನ ದಿನಗಳಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 70 ಕೋಟಿ ರೂ.ವೆಚ್ಚದ ನೂತನ ಒಪಿಡಿ ಸಹಿತ ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ವತ್ರೆಗಳಲ್ಲಿ ಸಿಬ್ಬಂದಿ ಸಹಿತ ವ್ಯವಸ್ಥಿತವಾಗಿರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಉನ್ನತೀಕರಣದ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಅಪಘಾತ ಪ್ರದೇಶಗಳಾದ ಹಳೆಯಂಗಡಿ, ಮೂಲ್ಕಿ ಮುಂತಾದ ಕಡೆಗಳಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಯೋಜನೆ ಪರಿಶೀಲನೆಯಲ್ಲಿದೆ.
ಮೂಲ್ಕಿಯ ಹಿರಿಯರ ತಾಲೂಕು ನಿರ್ಮಾಣ ಹೋರಾಟಕ್ಕೆ ಇಂದು ಫಲ ಲಭಿಸಿದೆ. ಅನುದಾನ ಕ್ರೋಡೀಕರಣದಲ್ಲಿ ಸಹಕರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಉಸ್ತುವಾರಿ ಸಚಿವ ದಿನೇಶ್‌ಗುಂಡೂರಾವ್ ಅವರನ್ನು ಸ್ಮರಿಸುವುದು ಬಹಳ ಅಗತ್ಯ. ವಿವಿಧ ಇಲಾಖೆಗಳ ಸಹಿತ ಶಾಸಕರ ಕೊಠಡಿಯೂ ಇದ್ದು ವಾರದಲ್ಲಿ ಒಂದು ದಿನ ಜನರಿಗಾಗಿ ಲಭ್ಯವಿರುತ್ತೇನೆ. ಮೂಲ್ಕಿಯ ಮುಂದಿನ ಅಗತ್ಯಗಳಿಗಾಗಿ ನ್ಯಾಯಾಲಯ ಮತ್ತು ಅಗ್ನಿಶಾಮಕ ದಳ ನಿರ್ಮಾಣಕ್ಕಾಗಿ ಸ್ಥಳ ಕಾದಿರಿಸಲಾಗಿದೆ.