ನಿತ್ಯವೂ ಗುರು-ಹಿರಿಯರನ್ನು ಗೌರವಿಸಿ

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ಅಣ್ಣಪ್ಪ ಶೆಣೈ, ಡಾ.ದೇವಿದಾಸ್​ ಎಸ್​. ನಾಯ್ಕ, ಕೆ.ವಿನಾಯಕ ಕಿಣಿ, ಕೆ.ರತ್ನಾಕರ್​ ಶೆಣೈ, ವಿದ್ಯಾ ಪೈ, ದಿನೇಶ್​ ಹೆಗ್ಡೆ ಆತ್ರಾಡಿ, ನಟರಾಜ್​ ಪ್ರಭು, ರೇಶ್ಮಾ ಪ್ರಭು ಇದ್ದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ಅಣ್ಣಪ್ಪ ಶೆಣೈ, ಡಾ.ದೇವಿದಾಸ್​ ಎಸ್​. ನಾಯ್ಕ, ಕೆ.ವಿನಾಯಕ ಕಿಣಿ, ಕೆ.ರತ್ನಾಕರ್​ ಶೆಣೈ, ವಿದ್ಯಾ ಪೈ, ದಿನೇಶ್​ ಹೆಗ್ಡೆ ಆತ್ರಾಡಿ, ನಟರಾಜ್​ ಪ್ರಭು, ರೇಶ್ಮಾ ಪ್ರಭು ಇದ್ದರು.
Published on

ಡಾ.ದೇವಿದಾಸ್​ ಎಸ್​. ನಾಯ್ಕ ಕಿವಿಮಾತು
ಉಡುಪಿ ಇಂದ್ರಾಳಿ ಶಾಲೆಯಲ್ಲಿ ವಾರ್ಷಿಕೋತ್ಸವ

ಉಡುಪಿ: ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗಬಾರದು. ಶಿಸ್ತುಬದ್ಧ ಜೀವನ ಅಳವಡಿಸಿಕೊಂಡು ಗುರು-ಹಿರಿಯರನ್ನು ಗೌರವಿಸುತ್ತ ಉತ್ತಮ ಪ್ರಜೆಗಳಾಗಿ ಬಾಳಬೇಕು. ಪಾಲಕರೂ ಸಹ ತಮ್ಮ ಮಕ್ಕಳ ವಿಚಾರವಾಗಿ ತಾತ್ಸಾರ ಮಾಡದೆ ಅವರಿಗೆ ಉತ್ತಮ ಚಿಂತನೆಗಳನ್ನು ತಿಳಿಸಿ ಮಾನಸಿಕ ಸ್ಥೈರ್ಯ ನೀಡಬೇಕು. ಶಿಕ್ಷಕರೂ ಸಹ ಪಾಠದೊಂದಿಗೆ ಮೌಲ್ಯ ಶಿಕ್ಷಣವನ್ನೂ ಬೋಧಿಸಿ ಆದರ್ಶಪ್ರಾಯರನ್ನಾಗಿಸಬೇಕು ಎಂದು ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್​ ಎಸ್​. ನಾಯ್ಕ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಸನ್ಮಾನ
ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ ಶೈಕ್ಷಣಿಕ ವರ್ಷದ ವಾರ್ಷಿಕ ವರದಿ ವಾಚಿಸಿದರು. ಕಳೆದ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ್ದ ರಜತ್​ ಜಿ. ರಾವ್​ ಶಾಲಾ ವಿದ್ಯಾರ್ಥಿಗಳ ಹಸ್ತಪ್ರತಿ 'ಲಹರಿ'ಯನ್ನು ಬಿಡುಗಡೆಗೊಳಿಸಿದರು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ಮತ್ತು ಕ್ರೀಡೆ, ಕರಾಟೆ ಹಾಗೂ ಇನ್ನಿತರ ವಿಭಾಗಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು.
ಶಾಲಾಡಳಿತ ಮಂಡಳಿಯ ಸದಸ್ಯರಾದ ಕೆ.ರತ್ನಾಕರ್​ ಶೆಣೈ, ವಿದ್ಯಾ ಅಮರ ಪೈ, ರಕ್ಷಕ&-ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ್​ ಹೆಗ್ಡೆ ಆತ್ರಾಡಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಟರಾಜ್​ ಪ್ರಭು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ನಾಯಕಿ ಅಭಿನೇತ್ರಾ ಸತೀಶ ಆಚಾರ್ಯ ಸ್ವಾಗತಿಸಿದರು. ವಂದಿತಾ ವಿ. ಉಡುಪಿ ಹಾಗೂ ಸೂರಜ್​ ಕಾರ್ಯಕ್ರಮ ನಿರೂಪಿಸಿದರು. ಅವನಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಮನೋರಂಜನೆ, 'ಎಂಡ್​ ಇಲ್ಲದ ಬಂಡ್​ ಅವತಾರ' ನಾಟಕ ಮತ್ತು 'ಕಂಸ ಧಿಗ್ವಿಜಯ-ಕಂಸ ವಧೆ' ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net