ವಾಲಿಬಾಲ್‌ನಲ್ಲಿ ಆಳ್ವಾಸ್ ಶಾಲೆ ಪಾರಮ್ಯ

 ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗರಾಜ್ ಬಿ., ಡಾ.ಆಶೀರ್ವಾದ್ ಎಂ.ಪಿ., ಪ್ರಜ್ವಲ್ ಆಚಾರ್ ಮತ್ತಿತರರಿದ್ದರು.
ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗರಾಜ್ ಬಿ., ಡಾ.ಆಶೀರ್ವಾದ್ ಎಂ.ಪಿ., ಪ್ರಜ್ವಲ್ ಆಚಾರ್ ಮತ್ತಿತರರಿದ್ದರು.
Published on
ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ನಡೆದ ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವಿಧ ವಯೋ ವಿಭಾಗಗಳ ತಂಡಗಳು ಪೈಪೋಟಿ ನಡೆಸಿದ್ದು, ವಿಜೇತ ತಂಡಗಳು, ಅತ್ಯುತ್ತಮ ಆಟಗಾರರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ರೋಟರಿ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ನಾಗರಾಜ್ ಬಿ., ಉದ್ಯಮಿ ಪ್ರಜ್ವಲ್ ಆಚಾರ್, ಮೂಡುಬಿದಿರೆ ರೋಟರಿ ಕ್ಲಬ್ ಡಾ.ಆಶೀರ್ವಾದ್ ಎಂ.ಪಿ., ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ರೋಟರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಸುಧೀರ್ ಕುಮಾರ್, ನಾಗೇಶ್, ಸುನೀಲ್ ಮಿರಾಂಡ, ನವೀನ್ ಚಂದ್ರ ಅಂಬೂರಿ, ಗಜಾನನ ಮರಾಠೆ, ಹರಿಶ್ಚಂದ್ರ, ಶಹನ್ ರಾಜ್, ದೀಕ್ಷಿತ್, ಸುನೀತಾ ಉಪಸ್ಥಿತರಿದ್ದರು. ಪ್ರೇಮಲತಾ ನಿರೂಪಿಸಿದರು.
ಯು-17 ಬಾಲಕರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಪ್ರಥಮ, ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ದ್ವಿತೀಯ ಸ್ಥಾನ ಪಡೆದವು. ನಾಗರಾಜ್ ಅತ್ಯುತ್ತಮ ಆಲ್‌ರೌಂಡರ್, ಆಳ್ವಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತಿಗೆಯ ದಿಗಂತ್ ಅತ್ಯುತ್ತಮ ಅಟ್ಯಾಕರ್, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆಯ ಮಿಲನ್ ಅತ್ಯುತ್ತಮ ಪಾಸರ್ ಪ್ರಶಸ್ತಿ ಪಡೆದರು. ಯು-17 ಬಾಲಕಿಯರ ವಿಭಾಗದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಪ್ರಥಮ, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ ದ್ವಿತೀಯ ಸ್ಥಾನ ಗಳಿಸಿತು. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆಯ ಪ್ರಿಯ ಅತ್ಯುತ್ತಮ ಆಲ್‌ರೌಂಡರ್, ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ತನ್ವಿ ಅತ್ಯುತ್ತಮ ಅಟ್ಯಾಕರ್, ಯುಕ್ತಿ ಅತ್ಯುತ್ತಮ ಪಾಸರ್ ಪ್ರಶಸ್ತಿ ಪಡೆದರು.

ವಿಜೇತರಿಗೆ ಪ್ರಶಸ್ತಿ ಪ್ರದಾನ

ಯು-14 ಬಾಲಕರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ ಪ್ರಥಮ, ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ದ್ವಿತೀಯ ಸ್ಥಾನ ಪಡೆದವು. ರೋಟರಿ ಆಂಗ್ಲ ಮಾಧ್ಯಮ ಶಾಲೆ ಶ್ರೀದಾಂತ್ ಅತ್ಯುತ್ತಮ ಆಲ್‌ರೌಂಡರ್, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ನಿಖಿಲ್ ಅತ್ಯುತ್ತಮ ಅಟ್ಯಾಕರ್, ಇಶಾಂತ್ ಅತ್ಯುತ್ತಮ ಪಾಸರ್ ಪ್ರಶಸ್ತಿ ಪಡೆದರು. ಯು-14 ಬಾಲಕಿಯರ ವಿಭಾಗದಲ್ಲಿ ಜೈನ್ ಪ್ರೌಢಶಾಲೆ ಮೂಡುಬಿದಿರೆ ಪ್ರಥಮ, ಸ.ಮಾ.ಹಿ.ಪ್ರಾ. ಶಾಲೆ ಬೆಳುವಾಯಿ ಮೈನ್ ದ್ವಿತೀಯ ಸ್ಥಾನ ಗಳಿಸಿತು. ತ್ರಿಶಾ ಅತ್ಯುತ್ತಮ ಆಲ್‌ರೌಂಡರ್, ವೀಕ್ಷ ಜೈನ್ ಪ್ರೌಢಶಾಲೆ ಮೂಡುಬಿದಿರೆಯ ಅತ್ಯುತ್ತಮ ಅಟ್ಯಾಕರ್, ಸ್ತುತಿ ಅತ್ಯುತ್ತಮ ಪಾಸರ್ ಪ್ರಶಸ್ತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net