ಗುಳಿಕಾನದವರಿಗೆ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ತಲಾ 5 ಲಕ್ಷ ರೂ. ಹಣ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಅಂದು ಮುಂಜೂರಾಗಿತ್ತು. ಅಲ್ಲದೆ ಗುಳಿಕಾನದಲ್ಲಿ ತೊಂದರೆಗೊಳಗಾದ ಉಮೇಶ್, ಲೋಕಯ್ಯ, ಪೂವಮ್ಮ, ಬಾಲಪ್ಪ, ಅಂಗಾರ, ಪುಟ್ಟಣ್ಣ, ದೆಯ್ಯು, ಯಮುನಾ, ಬಾಬು, ಚನ್ನು ಇವರೆಲ್ಲರ ಅಕೌಂಟ್‌ಗೆ ಆರಂಭಿಕ ಮೊತ್ತ ಒಂದು ಲಕ್ಷ ರೂ. ಜಮೆಯೂ ಆಯಿತು. ಆದರೆ ಇದರಲ್ಲಿ ಉಮೇಶ್ ಎಂಬುವರು ಮನೆ ನಿವೇಶನಕ್ಕೆ ಕಾಯದೆ ತಮಗೆ ಕಲ್ಮಕಾರಿನಲ್ಲಿದ್ದ ಸ್ವಂತ ಜಮೀನಿನಲ್ಲಿ ಮನೆ ಕಟ್ಟಲಾರಂಬಿಸಿದರು. ಬಳಿಕ ಅವರಿಗೆ ಹಂತ-ಹಂತವಾಗಿ ಐದು ಲಕ್ಷ ರೂ. ಹಣ ಬಂದು ಅದನ್ನು ಬಳಸಿ ಮನೆ ಕಟ್ಟಿಕೊಂಡರು. ಆದರೆ 1 ಲಕ್ಷ ರೂ. ಅಕೌಂಟ್‌ಗೆ ಬಿದ್ದ ಉಳಿದವರು ಜಮೀನು ಇಲ್ಲದೆ, ಮನೆ ಕಟ್ಟಿಕೊಳ್ಳಲು ಆರಂಭಿಸದ ಕಾರಣ ಹಣ ಅಕೌಂಟ್‌ನಿಂದ ತೆಗೆಯಲಾಗಿಲ್ಲ. ಇಂದಿಗೂ ಹಣ ಅಕೌಂಟ್‌ನಲ್ಲೇ ಇರುವುದಾಗಿ ತಿಳಿದು ಬಂದಿದೆ.