ಮದ್ಯ ಚಟಕ್ಕೆ ಒಳಗಾಗಿದ್ದಾತ ಆತ್ಮಹತ್ಯೆ

SUICIDE
SUICIDE
Published on
ಕಾರ್ಕಳ: ಮದ್ಯದ ಚಟಕ್ಕೆ ಒಳಗಾಗಿದ್ದ ಸಾಣೂರು ಗ್ರಾಮದ ಮಠದಕೆರೆ ನಿವಾಸಿ ಗಣೇಶ(48) ಎಂಬುವರು ಮನೆ ಪಕ್ಕದ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣೇಶ್ ಕೂಲಿ ಕೆಲಸ ಮಾಡಿಕೊಂಡಿದ್ದು, ಹಲವು ಸಮಯದಿಂದ ಮದ್ಯ ಸೇವನೆ ಚಟವಿತ್ತು. ಮಂಗಳವಾರ ಬೆಳಗ್ಗೆ ಕೊಟ್ಟಿಗೆಯ ಮಾಡಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ಅಣ್ಣ ಸುರೇಶ್ ಪೂಜಾರಿ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net