

ಉಡುಪಿ: ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ ಕುಸ್ತಿ ಸ್ಪರ್ಧೆಯಲ್ಲಿ ಮೂರು ವೈಯಕ್ತಿಕ ಪದಕ ಗೆದ್ದು, ಸಮಗ್ರ ಚಾಂಪಿಯನ್ಶಿಪ್ನಲ್ಲಿ ಪ್ರಥಮ ರನ್ನರ್ಅಪ್ ಸ್ಥಾನ ಗಳಿಸಿದ್ದಾರೆ.
65 ಕೆಜಿ ವಿಭಾಗದಲ್ಲಿ ಅದಿತಿ ಶೆಟ್ಟಿ ಪ್ರಥಮ ಸ್ಥಾನ, 68 ಕೆಜಿ ವಿಭಾಗದಲ್ಲಿ ದಿಶಾ ಡಿ. ಸಾಲ್ಯಾನ್ ದ್ವಿತೀಯ, 59 ಕೆಜಿ ವಿಭಾಗದಲ್ಲಿ ಮಾನೀಕ್ಷಾ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸೆ.23, 24ರಂದು ಸುರತ್ಕಲ್ನ ಗೋವಿಂದ ದಾಸ ಕಾಲೇಜ್ನಲ್ಲಿ ಸ್ಪರ್ಧೆ ನಡೆದಿತ್ತು.
ಸಾಧಕ ವಿದ್ಯಾರ್ಥಿನಿಯರಿಗೆ ಅಜ್ಜರಕಾಡು ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶ್ ಕುಮಾರ್ ಹಾಗೂ ಕ್ರೀಡಾ ಇಂಟರ್ನ್ ಚಂದ್ರಿಕಾ ಕಾಂಬ್ಳೆ ತರಬೇತಿ ನೀಡಿದ್ದರು ಎಂದು ಕಾಲೇಜ್ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.