ಕ್ಲಿಷ್ಟ ವಿಷಯಗಳನ್ನು ಅರ್ಥೈಸಲು ಎಐ ಸಹಕಾರಿ

 ಬೆಂಗಳೂರಿನ ಪ್ರಾಯೋಗಿಕ್ ಸಂಸ್ಥೆಯ ಸ್ಥಾಪಕ ಚೇತನ್ ಪ್ರಸಾದ್ ಅವರು ಶ್ರೀಕೃಷ್ಣ ಶರ್ಮ ಅವರಿಗೆ ಎಐ ಪ್ರೊಜೆಕ್ಟರ್ ಹಸ್ತಾತಂರಿಸಿದರು. ಪಲ್ಲವಿ ಚೇತನ್ ಪ್ರಸಾದ್, ಭರತ್, ಸಾವಿತ್ರಿ ಉಪಸ್ಥಿತರಿದ್ದರು.
ಬೆಂಗಳೂರಿನ ಪ್ರಾಯೋಗಿಕ್ ಸಂಸ್ಥೆಯ ಸ್ಥಾಪಕ ಚೇತನ್ ಪ್ರಸಾದ್ ಅವರು ಶ್ರೀಕೃಷ್ಣ ಶರ್ಮ ಅವರಿಗೆ ಎಐ ಪ್ರೊಜೆಕ್ಟರ್ ಹಸ್ತಾತಂರಿಸಿದರು. ಪಲ್ಲವಿ ಚೇತನ್ ಪ್ರಸಾದ್, ಭರತ್, ಸಾವಿತ್ರಿ ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನ ಮುಟ್ಟ ಕೂಡ ಅತ್ಯಂತ ಶ್ರೇಷ್ಠವಾಗಿದೆ. ಗಣಿತ, ವಿಜ್ಞಾನದಂತಹ ಕ್ಲಿಷ್ಟಕರ ವಿಷಯಗಳನ್ನು ಕೂಡ ವಿದ್ಯಾರ್ಥಿಗಳು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಲು ಎಐ ಅತ್ಯಂತ ಸಹಕಾರಿ ಎಂದು ಬೆಂಗಳೂರಿನ ಪ್ರಾಯೋಗಿಕ್ ಸಂಸ್ಥೆಯ ಸ್ಥಾಪಕ ಚೇತನ್ ಪ್ರಸಾದ್ ಹೇಳಿದರು.

ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಇದರ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯಕ್ಕೆ ಬೆಂಗಳೂರಿನ ಪ್ರಾಯೋಗಿಕ್ ಸಂಸ್ಥೆ ಕೊಡುಗೆಯಾಗಿ ನೀಡಿದ ಎಐ ಪ್ರೊಜೆಕ್ಟರ್ ಹಸ್ತಾಂತರಿಸಿ ಮಾತನಾಡಿದರು.
ವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಗಿಕ್ ಸಂಸ್ಥೆಯ ಪಲ್ಲವಿ ಚೇತನ್‌ಪ್ರಸಾದ್, ಶ್ರೀಗಂಧ ಫೌಂಡೇಶನ್‌ನ ಸ್ಥಾಪಕ ಭರತ್, ನಿವೃತ್ತ ಸಹಾಯಕ ಆಯುಕ್ತೆ ಸಾವಿತ್ರಿ, ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಎಂ., ವೇದವ್ಯಾಸ ವಿದ್ಯಾಲಯದ ಮುಖ್ಯಶಿಕ್ಷಕ ಪ್ರಶಾಂತ್ ಬಿ. ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net