ವಿದ್ಯಾರ್ಥಿ ನಿಲಯಗಳಲ್ಲಿ ಕೃಷಿಪಾಠ!

 ಕುಂದಾಪುರ ತಾಲೂಕಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ಬೆಳೆಸಿದ ತರಕಾರಿ ಗಿಡಗಳು.
ಕುಂದಾಪುರ ತಾಲೂಕಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ಬೆಳೆಸಿದ ತರಕಾರಿ ಗಿಡಗಳು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ 7 ಮೆಟ್ರಿಕ್ ಪೂರ್ವ ಹಾಗೂ 8 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ ಕೈತೋಟ ವಿದ್ಯಾರ್ಥಿಗಳಲ್ಲಿ ಮಣ್ಣಿನ ಕೆಲಸ, ಕೃಷಿಯ ಮೌಲ್ಯ, ಶ್ರಮ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ನೈಜ ಅನುಭವ ನೀಡುತ್ತಿದೆ.
ಹಂಗಳೂರು ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕುಂದಾಪುರ ಮೂಲ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕುಂದಾಪುರ ವಿಭಜಿತ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕೋಟೇಶ್ವರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಶಂಕರನಾರಾಯಣ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಕುಂದಾಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಕೆದೂರು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಅವಾಸೆಬೈಲು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಬಸ್ರೂರು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಉತ್ತಮ ಕೈತೋಟ ನಿರ್ವಹಣೆಗೆ ಸಾಕ್ಷಿಯಾಗಿದೆ.

ಕೈತೋಟ ನಿರ್ವಹಣೆ

ವಸತಿ ನಿಲಯದಲ್ಲಿ ಕೈತೋಟ ನಿರ್ವಹಣೆ ಮೂಲಕ ಮಕ್ಕಳು ಸಣ್ಣ ಜಮೀನಿನಲ್ಲಿ ತರಕಾರಿ, ಹೂ ಗಿಡಗಳು ಮತ್ತು ಔಷಧೀಯ ಗಿಡಗಳನ್ನು ನೆಟ್ಟು ಆರೈಕೆ ವಾಡುತ್ತಿದ್ದಾರೆ. ಕೈತೋಟದಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸರ್ಕಾರಿ ಶಾಲೆಗಳ ಬಿಸಿಯೂಟ ಹಾಗೂ ಅಂಗನವಾಡಿಗಳಿಗೆ ಹಂಚಲಾಗುತ್ತದೆ.

ಸಂಟಿತ ಪ್ರಯತ್ನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್.ಲವಾಣಿ ವಾರ್ಗದರ್ಶನದಲ್ಲಿ, ತಾಲೂಕು ಕಲ್ಯಾಣಾಧಿಕಾರಿ, ವಿವಿಧ ಹಾಸ್ಟೆಲ್‌ಗಳ ನಿಲಯ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿ ಸಮನ್ವಯತೆಯಲ್ಲಿ ಆಹಾರ ಸಮಿತಿ, ಶೈಕ್ಷಣಿಕ ಸಮಿತಿ, ಕೈತೋಟ ಸಮಿತಿ, ಸ್ವಚ್ಛತಾ ಸಮಿತಿ, ರಚಿಸಿ ಪ್ರತಿ ಸಮಿತಿಯ ಮೇಲುಸ್ತುವಾರಿಯನ್ನು ವಿದ್ಯಾರ್ಥಿಗಳೇ ವಹಿಸಿದ್ದಾರೆ.

ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ

ವಸತಿ ನಿಲಯದಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ ಮೂಲಕ ಅಡುಗೆ ಮನೆ ತ್ಯಾಜ್ಯ, ಆಹಾರ ತ್ಯಾಜ್ಯಗಳನ್ನು ಪೈಪಿನೊಳಗೆ ತುಂಬಿ ಗೊಬ್ಬರವನ್ನಾಗಿ ವಾರ್ಪಡಿಸಲಾಗುತ್ತದೆ. ಇದರ ಮೂಲಕ ಕಸದ ಪ್ರವಾಣ ಕಡಿಮೆಯಾಗುವುದು, ದುರ್ಗಂಧ ನಿಯಂತ್ರಣವಾಗುವುದು ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಸಾಧ್ಯವಾಗುತ್ತದೆ. ಪೈಪ್ ಕಾಂಪೋಸ್ಟ್ ಮೂಲಕ ಸಿಗುವ ಸಾವಯವ ಗೊಬ್ಬರವನ್ನು ಕೈತೋಟಕ್ಕೆ ಬಳಸಲಾಗುತ್ತಿದೆ.

ತರಹೇವಾರಿ ತರಕಾರಿ!

ಕೈತೋಟ ನಿರ್ವಹಣೆ ಸಮಿತಿಯು ಪ್ರತಿ ನಿಲಯಗಳಲ್ಲಿ ಪೌಷ್ಟಿಕ ಕೈತೋಟ ನಿರ್ಮಿಸಲಾಗಿದ್ದು, ಈ ಕೈತೋಟದಲ್ಲಿ ಬಸಳೆಸೊಪ್ಪು, ಹರಿವೆಸೊಪ್ಪು, ಪಾಲಕ್‌ಸೊಪ್ಪು, ಬೆಂಡೆ ಕಾಯಿ, ಹೀರೆಕಾಯಿ, ಬದನೆ ಕಾಯಿ, ಚೌಳಿಕಾಯಿ, ಸೋರೆಕಾಯಿ, ಮೂಲಂಗಿ, ಹಸಿಮೆಣಸು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುವುದರ ಮೂಲಕ ಪೋಷಕಾಂಶಯುಕ್ತ ಆಹಾರ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಯಾವ ನರ್ಸರಿಗೂ ಕಡಿಮೆ ಇಲ್ಲದಂತೆ ಕೆಲವು ನಿಲಯಗಳ ಕೈತೋಟಗಳು ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿ ಸ್ನೇಹಿ ಹಾಸ್ಟೆಲ್’ ನಮ್ಮ ಗುರಿಯಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದ ಜತೆಗೆ ಪತ್ಯೇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಕೈತೋಟ ನಿರ್ವಹಣೆ ವಿದ್ಯಾರ್ಥಿಗಳಿಗೆ ಪೋಷಕಾಂಶಯುಕ್ತ ಆಹಾರ, ಪರಿಸರ ಜಾಗ್ರತೆ, ಕೌಶಲ್ಯ ಅಭಿವೃದ್ಧಿ, ಸ್ವಚ್ಛತೆ ಮತ್ತು ಶಿಸ್ತು ವಾನಸಿಕ ಆರೋಗ್ಯ, ಒಗ್ಗಟ್ಟು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಈ ಕ್ರಿಯಾಶೀಲತೆ ಬೆಳೆಸುವಲ್ಲಿ ವಸತಿ ನಿಲಯ ಮೇಲ್ವಿಚಾರಕರ ಪಾತ್ರವೂ ಶ್ಲಾನೀಯ. ಹಾಕಪ್ಪ ಆರ್.ಲವಾಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net