ಕೃಷಿ ಜೀವನದ ಅವಿಭಾಜ್ಯ ಅಂಗ

 ಹೆಬ್ರಿ ಪಿ.ಆರ್.ಎನ್. ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಮುದ್ರಾಡಿಯ ಹಳೆಬೀಡಿನ ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು.
ಹೆಬ್ರಿ ಪಿ.ಆರ್.ಎನ್. ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಮುದ್ರಾಡಿಯ ಹಳೆಬೀಡಿನ ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು.
Published on
ಹೆಬ್ರಿ: ಭಾರತ ಕೃಷಿ ಪ್ರಧಾನ ದೇಶ. ನಾವು ಜೀವನಕ್ಕೆ ಬೇಕಾದ ಉದ್ಯೋಗ ಪಡೆದರೂ ಆಹಾರ ಬೇಕೇ ಬೇಕು. ಆದ್ದರಿಂದ ಕೃಷಿ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.
ಮುದ್ರಾಡಿ ಹಳೆಬೀಡಿನ ಕೃಷ್ಣ ಶೆಟ್ಟಿಗಾರ್ ಗದ್ದೆಯಲ್ಲಿ ಹೆಬ್ರಿ ಪಿ.ಆರ್.ಎನ್. ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಭತ್ತ ಬೆಳೆಯುವ ಕೃಷಿ ಪ್ರಾತ್ಯಕ್ಷಿಕೆ ಹಾಗೂ ನೇಜಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಪ್ರಮುಖರಾದ ಸನತ್ ಶೆಟ್ಟಿಗಾರ್, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಉಮೇಶ್, ಪ್ರಕಾಶ್ ಎಂ., ಗಣಪತಿ ರಾವ್, ಹೆಬ್ರಿ ಅಲಯನ್ಸ್‌ನ ಬಾಲಚಂದ್ರ ಮುದ್ರಾಡಿ, ಕೆ.ರಾಮಚಂದ್ರ ಭಟ್ ವರಂಗ, ಶಿಕ್ಷಕರಾದ ವೇದವ್ಯಾಸ ತಂತ್ರಿ ಮಡಾಮಕ್ಕಿ, ಪಂಚಮಿ, ನಿಶಾನ್ ಶೆಟ್ಟಿ, ಸೌಪರ್ಣಿಕಾ ಜೋಷಿ, ನವ್ಯಾ ಪೈ, ಪ್ರವೀಣ್ ಹೆಗ್ಡೆ ಮತ್ತಿತರರಿದ್ದರು. ಸಂಸ್ಕೃತ ಶಿಕ್ಷಕ ವೇದವ್ಯಾಸ ತಂತ್ರಿ ಮಡಾಮಕ್ಕಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net