ಕೃಷಿ ಆಗಲಿ ಲಾಭದಾಯಕ ಕಸುಬು

ಪ್ರಗತಿಪರ ಕೃಷಿಕರಾದ ಸುನಂದ ಶೆಟ್ಟಿ ಪಡುಮಾರ್ನಾಡು ಅವರನ್ನು ಸನ್ಮಾನಿಸಲಾಯಿತು. ಉಮಾನಾಥ ಕೋಟ್ಯಾನ್, ಕೆ.ಕೃಷ್ಣರಾಜ ಹೆಗ್ಡೆ, ಸಂಪತ್ ಸಾಮ್ರಾಜ್ಯ, ವೀಣಾ ರೈ, ಸಜನಾ, ಬ್ರಹ್ಮಕುಮಾರಿ ದೀಪಾ ಈಶ್ವರಿ, ಲಿಯೋ ವಾಲ್ಟರ್ ನಝರತ್, ಅಭಯ ಕುಮಾರ್ ಇದ್ದರು.
ಪ್ರಗತಿಪರ ಕೃಷಿಕರಾದ ಸುನಂದ ಶೆಟ್ಟಿ ಪಡುಮಾರ್ನಾಡು ಅವರನ್ನು ಸನ್ಮಾನಿಸಲಾಯಿತು. ಉಮಾನಾಥ ಕೋಟ್ಯಾನ್, ಕೆ.ಕೃಷ್ಣರಾಜ ಹೆಗ್ಡೆ, ಸಂಪತ್ ಸಾಮ್ರಾಜ್ಯ, ವೀಣಾ ರೈ, ಸಜನಾ, ಬ್ರಹ್ಮಕುಮಾರಿ ದೀಪಾ ಈಶ್ವರಿ, ಲಿಯೋ ವಾಲ್ಟರ್ ನಝರತ್, ಅಭಯ ಕುಮಾರ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಮಾತ್ರ ಕೃಷಿಯನ್ನು ಲಾಭದಾಯಕ ಕಸುಬನ್ನಾಗಿಸಲು ಮತ್ತು ಸಂತೃಪ್ತಿಯ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಇಲಾಖೆ ದ.ಕ., ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಮತ್ತು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಕೃಷಿಕರಾದ ಸುನಂದ ಶೆಟ್ಟಿ ಪಡುಮಾರ್ನಾಡು ಮತ್ತು ಜೈಸನ್ ಲೋಬೊ ಶಿರ್ತಾಡಿ ಅವರನ್ನು ಸನ್ಮಾನಿಸಲಾಯಿತು. ರೈತರಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕೃಷಿಕ ಸಮಾಜದ ಪ್ರಮುಖರಾದ ಸಂಪತ್ ಸಾಮ್ರಾಜ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ರೈ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸಜನಾ, ಬ್ರಹ್ಮಕುಮಾರಿ ದೀಪಾ ಈಶ್ವರಿ, ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಸಂಸ್ಥೆ ಅಧ್ಯಕ್ಷ ಲಿಯೋ ವಾಲ್ಟರ್ ನಝರತ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮುಖಂಡ ಶಾಂತಿಪ್ರಸಾದ್ ಹೆಗ್ಡೆ, ಕೆವಿಕೆ ವಿಜ್ಞಾನಿ ಕೇದರನಾಥ್, ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಲ್ಲಣ್ಣ ಗೌಡ ಉಪಸ್ಥಿತರಿದ್ದರು.
ರೈತ ಜನ್ಯ ಕಂಪನಿ ಸಿಇಒ ಸಂದೀಪ್ ಸನ್ಮಾನಪತ್ರ ವಾಚಿಸಿದರು. ದೀಪಕ್ ಸ್ವಾಗತಿಸಿದರು. ಸದಾನಂದ ನಾರಾವಿ ನಿರೂಪಿಸಿದರು.ನಂತರ ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಕೃಷಿ ವಿಚಾರಗೋಷ್ಠಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net