ಕಳೆದ ವರ್ಷ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು ಸೇರಿಸಿ 13,100 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ವಾಡಲಾಗಿತ್ತು. ಆದರೆ ಈ ಬಾರಿ ಕುಂದಾಪುರ ಹೋಬಳಿಯಲ್ಲಿದ್ದ ಹೆಬ್ರಿ ತಾಲೂಕಿನ ಬೆಳ್ವೆ, ಮಡಾಮಕ್ಕಿ, ಶೇಡಿಮನೆ ಹಾಗೂ ಅಲ್ಬಾಡಿ ಗ್ರಾಮಗಳನ್ನು ಕಾರ್ಕಳಕ್ಕೆ ಸೇರಿಸಿದ್ದರಿಂದ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ 232 ಹೆಕ್ಟೇರ್ ಪ್ರದೇಶ ಕಡಿಮೆಯಾದಂತಾಗಿದೆ. ಬೈಂದೂರು ಹೋಬಳಿಯಲ್ಲಿ 4,192 ಹೆಕ್ಟೇರ್ ಪ್ರದೇಶ, ವಂಡ್ಸೆ ಹೋಬಳಿಯಲ್ಲಿ 4,076 ಹೆಕ್ಟೇರ್ ಪ್ರದೇಶ ಹಾಗೂ ಕುಂದಾಪುರ ಹೋಬಳಿಯಲ್ಲಿ 4,600 ಸೇರಿದಂತೆ ಒಟ್ಟಾರೆ 12,868 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯದ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.