ಉಡುಪಿಯ ಡಾ. ಜಿ. ಶಂಕರ್ ಕಾಲೇಜು ಮತ್ತು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಡುವೆ ಸಹಕಾರದ ಒಪ್ಪಂದ ಮಾಡಿಕೊಳ್ಳಲಾಯಿತು. ಡಾ. ಶ್ರೀಶ ಭಟ್, ಪ್ರೊ. ನಿಕೇತನಾ, ಸಂತೋಷ್ ಪ್ರಭು ಎಂ., ಪ್ರೊ. ಕೃಷ್ಣ ಭಟ್, ಪ್ರೊ. ಶ್ರೀಮತಿ ಅಡಿಗ ಇದ್ದರು.
Published on:
Copied
Follow Us
* ಆಕಾಂಕ್ಷ ಟ್ರಸ್ಟ್ನ ಡಾ. ಶ್ರೀಶ ಭಟ್ ಅನಿಸಿಕೆ
* ಅಜ್ಜರಕಾಡು ಕಾಲೇಜಿನೊಂದಿಗೆ ಕಲಿಕಾ ಒಪ್ಪಂದ
ಉಡುಪಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆಯಿಂದ ಅನೇಕ ಪ್ರಕಾರದ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸಂವಹನ ಕೌಶಲ, ನೆಟ್ವರ್ಕಿಂಗ್ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಂದಿನ ಉದ್ಯೋಗಾಕಾಂಕ್ಷಿಗಳಿಗೆ ಅತ್ಯಗತ್ಯ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಡಾ. ಶ್ರೀಶ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಅಜ್ಜರಕಾಡುನಲ್ಲಿರುವ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಡುವೆ ಸಹಕಾರದ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿ ಮಾತನಾಡಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂತೋಷ್ ಪ್ರಭು ಎಂ. ಮಾತನಾಡಿ, ಕಾಲೇಜು ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಡುವಿನ ಒಪ್ಪಂದದ ಉದ್ದೇಶ ಹಾಗೂ ಮಹತ್ವ ವಿವರಿಸಿದರು.
ವಿದ್ಯಾರ್ಥಿಗಳ ಉದ್ಯೋಗಾರ್ಹತೆ ವೃದ್ಧಿಸಲು ಎರಡು ದಿನಗಳ 'ಸ್ಕಿಲ್ ಎಡ್ಜ್ ಕರಿಯರ್ ರೆಡಿನೆಸ್ ಬೂಟ್ಕ್ಯಾಂಪ್'ಗೆ ಚಾಲನೆ ನೀಡಲಾಯಿತು.
ಶಿಬಿರದಲ್ಲಿ ನೇಮಕಾತಿ ಪ್ರಕ್ರಿಯೆ, ವೃತ್ತಿಪರ ಸಂವಹನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ವಿಷಯಗಳ ಕುರಿತು ಟ್ರಸ್ಟ್ನ ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್, ಐಕ್ಯುಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.
"
ಕೌಶಲಗಳ ಕೊರತೆ ಇರುವವರಿಗೆ ಇದೊಂದು ಉತ್ತಮ ವೇದಿಕೆ. ವಿದ್ಯಾರ್ಥಿಗಳು ತಮಗೆ ದೊರೆತ ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಬೇಕು.