ಸತ್ಯ ಪ್ರತಿಪಾದಕರಾಗಿದ್ದ ಅಗ್ನಿ ಬನ್ನಿರಾಯರು

ಉಡುಪಿಯಲ್ಲಿ ಆಯೋಜಿಸಿದ್ದ ಅಗ್ನಿ ಬನ್ನಿರಾಯ ಜಯಂತಿಯನ್ನು ಎಂ.ಎ. ಗಪೂರ್​ ಉದ್ಘಾಟಿಸಿದರು. ಸುಬ್ರಹ್ಮಣ್ಯ, ಡಾ.ಶ್ರೀಕಾಂತ್​ ಸಿದ್ಧಾಪುರ, ಪೂರ್ಣಿಮಾ, ನವನೀತ್​, ರಾಮಾಂಜಿ ನಮ್ಮಭೂಮಿ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಅಗ್ನಿ ಬನ್ನಿರಾಯ ಜಯಂತಿಯನ್ನು ಎಂ.ಎ. ಗಪೂರ್​ ಉದ್ಘಾಟಿಸಿದರು. ಸುಬ್ರಹ್ಮಣ್ಯ, ಡಾ.ಶ್ರೀಕಾಂತ್​ ಸಿದ್ಧಾಪುರ, ಪೂರ್ಣಿಮಾ, ನವನೀತ್​, ರಾಮಾಂಜಿ ನಮ್ಮಭೂಮಿ ಇದ್ದರು.
Published on

* ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್​ ಮಾಹಿತಿ

* ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಯಂತಿ ಆಚರಣೆ

ಉಡುಪಿ: ಮಹಾನ್​ ದಾರ್ಶನಿಕರಾಗಿದ್ದ ಅಗ್ನಿ ಬನ್ನಿರಾಯ ಅವರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ. ಶ್ರಮ ಜೀವನಕ್ಕೆ ಹೆಸರಾದ ತಿಗಳ ಕ್ಷತ್ರಿಯ ಸಮುದಾಯದವರು ಅಗ್ನಿ ಬನ್ನಿರಾಯ ಅವರನ್ನು ಆರಾಧ್ಯ ದೇವರಾಗಿ ಪೂಜಿಸುತ್ತಾರೆ. ಶೋಷಣೆಮುಕ್ತ ಸಮಾಜಕ್ಕೆ ಶ್ರಮಿಸಿದ್ದ ಅಗ್ನಿ ಬನ್ನಿರಾಯ ಸತ್ಯ ಪ್ರತಿಪಾದಕರಾಗಿದ್ದರು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಪೂರ್​ ಹೇಳಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ (ಮಾ.27) ಆಯೋಜಿಸಿದ್ದ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೋಟಗಾರಿಕೆಯಲ್ಲಿ ಕೌಶಲ

ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್​ ಸಿದ್ಧಾಪುರ ಮಾತನಾಡಿ, ಜನಪದ ಹಾಗೂ ಪೌರಾಣಿಕ ಮೂಲದಿಂದ ಅಗ್ನಿ ಬನ್ನಿರಾಯರ ಕಥೆಗಳು ಲಭಿಸುತ್ತವೆ. ಭಾಷಾವಾರು ಪ್ರಾಂತ್ಯ ರಚನೆಗೂ ಮೊದಲು ತಿಗಳರು ತಮ್ಮ ರಾಜ್ಯ ರಕ್ಷಣೆ ಹಾಗೂ ಸ್ವಾಮಿ ನಿಷ್ಠೆಗಾಗಿ ಸೈನ್ಯ ಸೇರಿ ಅನೇಕರು ಪ್ರಾಣ ಅರ್ಪಿಸಿದ್ದಾರೆ ಎನ್ನುವುದು ಶಾಸನದಲ್ಲಿ ಉಲ್ಲೇಖವಿದೆ. ಈ ಸಮುದಾಯದವರು ಹೆಚ್ಚಾಗಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕಾಣುತ್ತಾರೆ. ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರವು ನಿಗಮವನ್ನೂ ಸ್ಥಾಪಿಸಿದೆ. ತೋಟಗಾರಿಕೆಯಲ್ಲಿ ಕೌಶಲ ಹೊಂದಿದ ತಿಗಳರು ಬೆಂಗಳೂರಿನ ಲಾಲ್​ಬಾಗ್​ ಉದ್ಯಾನವನ ನಿರ್ಮಿಸಿದ್ದಾರೆ. ಅಲ್ಲಿನ ಕೈತೋಟಗಳ ರಚನೆ ಇಂದಿಗೂ ವಿಶ್ವದ ಗಮನ ಸೆಳೆಯುತ್ತಿದೆ ಎಂದರು.
ಉಪ ತಹಸಿಲ್ದಾರ್​ ನವನೀತ್​, ಜಿಲ್ಲಾಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ವಂದಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.
"

ವಿವಿಧ ಸಂತರು, ಶರಣರು, ದಾರ್ಶನಿಕರ ಜಯಂತಿಯನ್ನು ಸರ್ಕಾರ ಕಾಲಕಾಲಕ್ಕೆ ಆಚರಿಸುತ್ತಿದೆ. ಅವರು ನಾಡಿಗೆ ನೀಡಿದ ಉದಾತ್ತ ಕೊಡುಗೆ ಸ್ಮರಿಸುತ್ತ ಅದನ್ನು ಯುವಜನರು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಅವರ ಉದಾತ್ತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅದರಿಂದ ಇಂತಹ ಜಯಂತಿ ಆಚರಣೆ ಸಾರ್ಥಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net