ಉಡುಪಿಯಲ್ಲಿ 'ಅಧ್ಯಾಪಕ ಭೂಷಣ' ಪ್ರಶಸ್ತಿ ಪ್ರದಾನ ಸೆ.26ರಂದು

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಮಾಧವ್​ ಎಂ.ಕೆ. ಮಾತನಾಡಿದರು. ಡಾ.ಸುರೇಂದ್ರ ಶೆಟ್ಟಿ, ಡಾ.ಸುಧಾ, ಡಾ. ಚಂದ್ರಕಾಂತ್​ ಭಟ್​, ಜಯಲಕ್ಷ್ಮೀ ಶೆಟ್ಟಿ, ಧೀರಜ್​ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಮಾಧವ್​ ಎಂ.ಕೆ. ಮಾತನಾಡಿದರು. ಡಾ.ಸುರೇಂದ್ರ ಶೆಟ್ಟಿ, ಡಾ.ಸುಧಾ, ಡಾ. ಚಂದ್ರಕಾಂತ್​ ಭಟ್​, ಜಯಲಕ್ಷ್ಮೀ ಶೆಟ್ಟಿ, ಧೀರಜ್​ ಇದ್ದರು.
Published on

* ಕೆಆರ್​ಎಂಎಸ್​ ಜಂಟಿ ಕಾರ್ಯದರ್ಶಿ ಡಾ. ಮಾಧವ್​ ಎಂ.ಕೆ. ಮಾಹಿತಿ

* ಡಾ. ಎಂ.ಮೋಹನ್​ ಆಳ್ವಾರಿಗೆ 'ಜೀವಮಾನದ ಸಾಧನೆ' ಪುರಸ್ಕಾರ 

ಉಡುಪಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು (ಕೆಆರ್​ಎಂಎಸ್​) ವಿಭಾಗದ ವತಿಯಿಂದ 'ಪ್ರೇರಣಾ ದಿವಸ್​' ನಿಮಿತ್ತ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಸೆ.26ರಂದು ಮಧ್ಯಾಹ್ನ 2:30ಕ್ಕೆ ಹೋಟೆಲ್​ ಕಿದಿಯೂರಿನ ಮಾಧವ ಕೃಷ್ಣ ಸಭಾಭವನದಲ್ಲಿ 'ಅಧ್ಯಾಪಕ ಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಆಳ್ವಾಸ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್​ ಆಳ್ವಾ ಅವರಿಗೆ 'ಜೀವಮಾನದ ಸಾಧನೆ' ವಿಶೇಷ ಪುರಸ್ಕಾರ ನೀಡಲಾಗುತ್ತಿದೆ ಎಂದು ಕೆಆರ್​ಎಂಎಸ್​ನ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಮಾಧವ್​ ಎಂ.ಕೆ. ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಸೆ.19) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶಿಕ್ಷಣ ಕ್ಷೇತ್ರದ ಆರು ವಿಭಾಗದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಆರ್​ಎಸ್​ಎಸ್​ನ ಕ್ಷೇತ್ರೀಯ ಕಾರ್ಯವಾಹ ಎನ್​.ತಿಪ್ಪೇಸ್ವಾಮಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್​ ಧರ್ಮ, ಕೊಡಗು ವಿವಿ ಕುಲಪತಿ ಪ್ರೊ. ಅಶೋಕ್​ ಸಂಗಪ್ಪ ಆಲೂರು, ಕೆಆರ್​ಎಂಎಸ್​ನ ಅಧ್ಯಕ್ಷ ಡಾ.ಗುರುನಾಥ್​ ಬಡಿಗೇರ್​, ಜಂಟಿ ಕಾರ್ಯದರ್ಶಿ ಡಾ. ಮಾಧವ್​ ಎಂ.ಕೆ. ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಶಸ್ತಿ ಪುರಸ್ಕೃತರ ವಿವರ

ಅತ್ಯುತ್ತಮ ಆಡಳಿತಗಾರ: ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಸಿ.ಎ. ಗೋಪಾಲಕೃಷ್ಣ ಭಟ್​, ಗೋವಿಂದ ದಾಸ್​ ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ.ರಮೇಶ್​ ಭಟ್​ ಎಸ್​.ಜಿ., ಬೆಳ್ತಂಗಡಿ ಸರ್ಕಾರಿ ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ.ಪದ್ಮನಾಭ ಕೆ.
ಅತ್ಯುತ್ತಮ ಸಂಶೋಧಕ: ಮಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಭೋಜ ಪೂಜಾರಿ, ಸಿದ್ಧಕಟ್ಟೆ ಸರ್ಕಾರಿ ಪ್ರ.ದ. ಕಾಲೇಜಿನ ಪ್ರಾಂಶುಪಾಲ ಪ್ರೊ. ಅಜಕ್ಕಳ ಗಿರೀಶ್​ ಭಟ್​.
ಅತ್ಯುತ್ತಮ ಶಿಕ್ಷಕ: ಪುತ್ತೂರು ಸಕಾರಿ ಪ್ರ.ದ. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ, ಬಂಟ್ವಾಳ ಸಕಾರಿ ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ಚಂದ್ರ ಶಿಶಿಲಾ, ಮಂಗಳೂರಿನ ಬೆಸೆಂಟ್​ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್​ ಕೆ.ಸಿ.
ಅತ್ಯುತ್ತಮ ಗ್ರಂಥಪಾಲಕ: ಉಜಿರೆಯ ಎಸ್​ಡಿಎಂ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ, ವಿರಾಜಪೇಟೆಯ ಕಾವೇರಿ ಕಾಲೇಜಿನ ಗ್ರಂಥಪಾಲಕಿ ಡಾ. ಮುತ್ತಮ್ಮ ಎ.ಆರ್​. 
ಅತ್ಯುತ್ತಮ ದೈಹಿಕ ಶಿಕ್ಷಕ: ಕಾರ್ಕಳದ ಮಂಜುನಾಥ್​ ಪೈ ಮಂಜು ಸ್ಮಾರಕ ಸ.ಪ್ರ.ದ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಜಯಭಾರತಿ ಎ. ಮಡಿಕೇರಿಯ ಸ.ಮ.ಪ್ರ.ದ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ. ರಾಕಿ ಪೂವಣ್ಣ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಡಾ.ಸುರೇಂದ್ರ ಶೆಟ್ಟಿ, ದ.ಕ. ಜಿಲ್ಲಾಧ್ಯಕ್ಷೆ ಡಾ.ಸುಧಾ, ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ. ಚಂದ್ರಕಾಂತ್​ ಭಟ್​, ಕಾರ್ಯಕ್ರಮದ ಸಂಯೋಜಕಿ ಜಯಲಕ್ಷ್ಮೀ ಶೆಟ್ಟಿ, ತ್ರಿಷಾ ಕಾಲೇಜಿನ ಕನ್ನಡ ಉಪನ್ಯಾಸಕ ಧೀರಜ್​, ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ, ಕಾಪು ಸರ್ಕಾರಿ ಕಾಲೇಜಿನ ಗ್ರಂಥಪಾಲಕಿ ಯಶೋದಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net