ಆವರ್ಸೆಯಲ್ಲಿ 2 ಕಡೆ ಬೋರ್‌ವೆಲ್ ಬೇಡಿಕೆ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಕುಂಭಾಶಿಯಲ್ಲಿ ಹೆದ್ದಾರಿ ಕಾಮಗಾರಿಯಿಂದ ಪೈಪ್ ಲೈನ್‌ಗೆ ಹಾನಿ, ಬೇಳೂರಲ್ಲಿ ಓವರ್ ಹೆಡ್ ಟ್ಯಾಂಕ್, ಮೊಳಹಳ್ಳಿಯ ಕೋಣೆಹರ, ಹೆಬ್ಗೋಳಿಯಲ್ಲಿ ಟ್ಯಾಂಕ್ ಇದ್ದರೂ ನೀರಿನ ಸಂಪರ್ಕ ಆಗಿಲ್ಲ. ಕೆದೂರು ಹೊಸ ಟ್ಯಾಂಕ್, ಮಡಾಮಕ್ಕಿಯ ಶೇಡಿಮನೆಯಲ್ಲಿ ಬೋರ್‌ವೆಲ್ ಬೇಕಿದೆ ಎಂದು ಪಿಡಿಒಗಳು ತಿಳಿಸಿದರು. ವಾರಾಹಿ ನೀರು ಬರುವ ತನಕ ನೀರಿನ ಸಮಸ್ಯೆ ಇಲ್ಲ ಎಂದು ಬಹುತೇಕ ಪಿಡಿಒಗಳು ತಿಳಿಸಿದರು.