ಅಪಾಯಕಾರಿ ಗುಂಡಿ ಮುಚ್ಚಲು ಕ್ರಮ

 ಅಪಾಯಕಾರಿಯಾಗಿ ಪರಿಣಮಿಸಿದ್ದ ರಸ್ತೆ ಪಕ್ಕದ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಂಡಿರುವುದು.
ಅಪಾಯಕಾರಿಯಾಗಿ ಪರಿಣಮಿಸಿದ್ದ ರಸ್ತೆ ಪಕ್ಕದ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಂಡಿರುವುದು.
Published on
ಗುರುಪುರ: ಕಳೆದ ನಾಲ್ಕು ತಿಂಗಳಿಂದ ಸ್ಥಳೀಯರ ಪಾಲಿಗೆ ಆತಂಕಕಾರಿಯಾಗಿದ್ದ ತಿರುವೈಲು ಕೆತ್ತಿಕಲ್‌ನ ಸರ್ಕಾರಿ ಶಾಲೆ ಸಂಪರ್ಕ ರಸ್ತೆಯ ಗುಂಡಿ ದುರಸ್ತಿ ಕಾರ್ಯ ಕೊನೆಗೂ ಆರಂಭಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಪ್ರದೇಶದಲ್ಲಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಸಂಸ್ಥೆ ಒಳಚರಂಡಿಗಾಗಿ ಮಣ್ಣು ಅಗೆದಾಗ, ಹಳೆಯ ಮೋರಿ ನೆಲಸಮಗೊಂಡು ಬೃಹತ್ ಗುಂಡಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಈ ಗುಂಡಿ ನೀರಿನಿಂದ ತುಂಬಿ ವಾಹನ ಸವಾರರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೀವ್ರ ಸಂಚಕಾರ ತಂದೊಡ್ಡಿತ್ತು.
ಈ ಕುರಿತು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಾಗೂ ಮಾಜಿ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ನಿರಂತರ ಒತ್ತಡಕ್ಕೆ ಎನ್‌ಎಚ್ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಈಗ ಗುಂಡಿಯ ಪಕ್ಕದಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಡಿಬಿಎಲ್ ಸಂಸ್ಥೆ ರಸ್ತೆ ದುರಸ್ತಿ ನಡೆಸುತ್ತಿದ್ದು, ರಸ್ತೆಗೆ ಡಾಂಬರು ಅಳವಡಿಸಲಿದೆ. ಮೇಲ್ಭಾಗದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಶಾಲೆ ಸಂಪರ್ಕಿಸುವ ಹಳೆ ರಸ್ತೆ ದುರಸ್ತಿಯಾಗುತ್ತಲೇ ಹೆದ್ದಾರಿ ಸಂಪರ್ಕಿಸುವ ತಾತ್ಕಾಲಿಕ ರಸ್ತೆ ಮುಚ್ಚುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net