ವರದಿ ಆಧರಿಸಿ ಕಂಪನಿ ಮೇಲೆ ಕ್ರಮ

ನಂದಿಕೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗ್ರಾಮಸ್ಥರ ಅಹವಾಲು ಆಲಿಸಿದರು. ಲಕ್ಷ್ಮಣ ಶೆಟ್ಟಿವಾಲ್, ನಾಗೇಶ್ ರಾವ್, ನಾಗರಾಜ ರಾವ್, ಸೌಮ್ಯಲತಾ ಶೆಟ್ಟಿ ಮತ್ತಿತರರಿದ್ದರು.
ನಂದಿಕೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗ್ರಾಮಸ್ಥರ ಅಹವಾಲು ಆಲಿಸಿದರು. ಲಕ್ಷ್ಮಣ ಶೆಟ್ಟಿವಾಲ್, ನಾಗೇಶ್ ರಾವ್, ನಾಗರಾಜ ರಾವ್, ಸೌಮ್ಯಲತಾ ಶೆಟ್ಟಿ ಮತ್ತಿತರರಿದ್ದರು.
Published on
ವಿಜವಾಣಿ ಸುದ್ದಿಜಾಲ ಪಡುಬಿದ್ರಿ
ನಂದಿಕೂರು ವಿಶೇಷ ಆರ್ಥಿಕ ವಲಯದ ಬಳಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಟಕದ ದುರ್ವಾಸನೆ ಸಹಿತ ವಾಲಿನ್ಯದ ಬಗ್ಗೆ ಜ.22ರಂದು ತಾಂತ್ರಿಕ ತಜ್ಞರ ಸಮಿತಿ ಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಸಮಿತಿ ನೀಡುವ ವರದಿ ಆಧರಿಸಿ ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಗುರುವಾರ ನಂದಿಕೂರು ಗ್ರಾಮಕ್ಕೆ ಭೇಟಿದ ಶಾಸಕರ ಮುಂದೆ ಟಕದಿಂದಾಗುತ್ತಿರುವ ವಾಲಿನ್ಯದ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡರು. ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಪರಿಸರ ನಿಯಂತ್ರಣ ಮಂಡಳಿ ಕಚೇರಿಯ ಜಿಲ್ಲಾ ಸಹಾಯಕ ಅಧಿಕಾರಿ ಅಮೃತಾ ನಾಯಕ್ ಅವರನ್ನು ಕರೆಸಿ ಚರ್ಚಿಸಿದರು. ಇಲಾಖೆ ಉನ್ನತ ಅಧಿಕಾರಿಗಳಿಗೆ ಕರೆ ವಾಡಿ ಪರಿಹಾರ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಸ್ಥಳೀಯ ದೇವಳ ಅರ್ಚಕ ಜರ್ನಾದನ ಭಟ್, ಕೊಳಚ್ಚೂರು ಕೊಂಡೆಟ್ಟು ಸುಕುವಾರ ಶೆಟ್ಟಿ, ಲಕ್ಷ್ಮಣ ಶೆಟ್ಟಿವಾಲ್, ನಾಗರಾಜ ರಾವ್, ಪಲಿವಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಪ್ರವೀಣ್ ಕುವಾರ್ ಅಡ್ವೆ ಗರಡಿಮನೆ, ಸತೀಶ್ ದೇವಾಡಿಗ, ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಉದಯ ರೈ, ತಾಪಂ ವಾಜಿ ಸದಸ್ಯ ದಿನೇಶ್ ಕೋಟ್ಯಾನ್ ಮತ್ತಿತರರಿದ್ದರು. ಟಕದ ಸಮಸ್ಯೆಗಳ ಕುರಿತಂತೆ ವಾರದ ಹಿಂದಷ್ಟೇ ‘ವಿಜಯವಾಣಿ’ ಸರಣಿ ವರದಿ ಪ್ರಕಟಿಸಿತ್ತು.


ತಪಾಸಣೆ ನಡೆಸಲು ಸೂಚನೆ

ಪರವಾನಗಿ ಇಲ್ಲದೆ ಕಂಪನಿಗೆ ಅಕ್ರಮವಾಗಿ ಟನ್‌ಗಟ್ಟಲೆ ಮರಗಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕರು ಅರಣ್ಯ ಇಲಾಖೆಗೆ ಸೂಚಿಸಬೇಕೆಂದು ಸಂದೀಪ್ ಪಲಿವಾರು ಮನವಿ ವಾಡಿದರು. ಚೆಕ್‌ಪೋಸ್ಟ್ ಸ್ಥಾಪಿಸಿ ಶುಕ್ರವಾರದಿಂದ ಮರ ಸಾಗಾಟ ವಾಹನಗಳನ್ನು ತಪಾಸಣೆ ಮಾಡುವಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.

ಪಡುಬಿದ್ರಿ, ನಂದಿಕೂರು, ಪಲಿವಾರು, ಕರ್ನಿರೆ, ಉಚ್ಚಿಲ ಭಾಗದವರೆಗೂ ನಿತ್ಯವೂ ಟಕದಿಂದ ಹೊರಸೂಸುವ ದುರ್ವಾಸನೆಯಿಂದ ಪರಿಸರದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net