ಉತ್ತಮ ಮಾರ್ಗದಲ್ಲಿ ಗುರಿ ಸಾಧನೆ

 ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಕುರಿತ ಕಾರ್ಯಾಗಾರದಲ್ಲಿ ಪ್ರಮುಖರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಕೆ.ರಾಧಾಕೃಷ್ಣ ಶೆಣೈ, ಕೃಷ್ಣ ಅಡಿಗ, ದಿನಕರ ಆರ್.ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಕುರಿತ ಕಾರ್ಯಾಗಾರದಲ್ಲಿ ಪ್ರಮುಖರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಕೆ.ರಾಧಾಕೃಷ್ಣ ಶೆಣೈ, ಕೃಷ್ಣ ಅಡಿಗ, ದಿನಕರ ಆರ್.ಶೆಟ್ಟಿ ಉಪಸ್ಥಿತರಿದ್ದರು.
Published on
ಕುಂದಾಪುರ: ಕಲಿಯುವುದು ಒಂದು ಸವಾಲಾದರೆ ಕಲಿಯಲೇ ಬೇಕು ಎಂಬುದು ಅದಕ್ಕೆ ಉತ್ತರ. 25 ವರ್ಷ ನೀವು ಕಷ್ಟಪಟ್ಟರೆ ಮುಂದಿನ 75 ವರ್ಷ ಸುಖವಾಗಿ ಬಾಳಬಹುದು. ಜೀವನದಲ್ಲಿ ಉತ್ತಮ ಗುರಿ ಜತೆಗೆ ಗುರಿ ತಲುಪುವಲ್ಲಿ ಆಯ್ಕೆ ಮಾಡಿಕೊಂಡ ಮಾರ್ಗ ಉತ್ತಮವಾಗಿರಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಮಯ ಪಾಲನೆ, ವೈಯಕ್ತಿಕ ವೇಳಾಪಟ್ಟಿ, ಉತ್ತಮ ಸ್ನೇಹಿತರ ಆಯ್ಕೆ, ಸ್ವಚ್ಛತೆ, ವ್ಯಾಯಾಮ, ಶಕ್ತಿಯುತ ಆರೋಗ್ಯಕರ ಶರೀರ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕೆ.ರಾಧಾಕೃಷ್ಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಕೃಷ್ಣ ಅಡಿಗ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ದಿನಕರ ಆರ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನೇತ್ರಾವತಿ ವಂದಿಸಿದರು. ರೇಖಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net